ಯಾದಗಿರಿ | ಸಚಿವ ಪ್ರಿಯಾಂಕ್ ಖರ್ಗೆ ಅವರ ಮನೆ ಮುತ್ತಿಗೆ ಖಂಡನೀಯ : ವಸಂತ ಸುಂಗುಲ್ಕರ್
ಯಾದಗಿರಿ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಮನೆಗೆ ಮುತ್ತಿಗೆ ಹಾಕಿದ್ದು ಖಂಡನೀಯ ಎಂದು ದಲಿತ ಯುವ ಮುಖಂಡರಾದ ವಸಂತ ಸುಂಗುಲ್ಕರ್ ಅವರು ಆರೋಪಿಸಿದರು.
ಪ್ರಿಯಾಂಕ್ ಖರ್ಗೆಜೀ ಅವರನ್ನು ಸೈಧ್ಧಾಂತಿಕವಾಗಿ ಎದುರಿಸಲು ಆಗದೆ ಬಿಜೆಪಿಯವರು ಇಂತಹ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆದಾರ ಎನ್ನಲಾದ ಸಚಿನ್ ಪಾಂಚಳ ಆತ್ಮಹತ್ಯೆಗೂ ಪ್ರಿಯಾಂಕ್ ಖರ್ಗೆ ಅವರಿಗೆ ಯಾವುದೇ ಸಂಬಂಧ ಇಲ್ಲದಿದ್ದರೂ ರಾಜಕೀಯ ದುರುದ್ದೇಶಕ್ಕಾಗಿ ಅವರ ತೇಜೊವದೆ ಮಾಡುತ್ತಿದ್ದಾರೆ ಹಾಗೂ ಈ ರಾಜ್ಯದಲ್ಲಿ ಪ್ರಿಯಾಂಕ್ ಖರ್ಗೆ ಅವರು ಬಹಳ ಪ್ರಭಾವಿ ನಾಯಕರಾಗಿ ಹೊರಹೊಮ್ಮುತಿರುವುದರಿಂದ ಒಬ್ಬ ದಲಿತ ನಾಯಕ ದೊಡ್ಡ ಮಟ್ಟಕ್ಕೆ ಪ್ರಭಾವಿಯಾಗುತ್ತಿರುವದನ್ನು ಬಿಜೆಪಿ ಹಾಗೂ ಸಂಘ ಪರಿವಾರದವರಿಗೆ ಜಿರ್ಣಿಸಿಕೊಳ್ಳಲು ಆಗದೆ ಇಂತಹ ಸುಳ್ಳು ಅಪಾದನೆ ಹಾಗೂ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಮಲ್ಲಿಕಾರ್ಜುನ್ ಖರ್ಗೆ ಸಾಹೇಬರ ಕುಟುಂಬ ಸುಮಾರ 50ಕ್ಕೂ ಹೆಚ್ಚು ವರ್ಷಗಳ ಕಾಲ ರಾಜಕೀಯದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ ಮಾಡಿದ್ದಾರೆ. ಅವರ ಯಾವತ್ತು ಇಂತಹ ಕ್ಷುಲ್ಲಕ ಸಣ್ಣತನದ ರಾಜಕಾರಣ ಮಾಡಿಲ್ಲ ಎಂಬುದು ಸ್ವತಃ ಬಿಜೆಪಿ ನಾಯಕರಿಗೂ ಗೊತ್ತಿರುವ ವಿಚಾರ ಆದ್ರು ಅವರನ್ನು ಗುರಿಯಾಗಿ ಇಟ್ಟುಕೊಂಡು ರಾಜಕೀಯ ಮಾಡುವುದು ಇದು ರಾಜಕೀಯ ಹೇಡಿತನ ಎಂದು ಕಿಡಿಕಾರಿದರು.