ಯಾದಗಿರಿ | ಹತ್ತಿಕುಣಿ ಗ್ರಾ.ಪಂ ಉಪಾಧ್ಯಕ್ಷರಾಗಿ ಶೇಖರ ಹೊಸಳ್ಳಿ ಅವಿರೋಧ ಆಯ್ಕೆ
ಯಾದಗಿರಿ : ಇಲ್ಲಿನ ಹತ್ತಿಕುಣಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಶೇಖರ ಹಣಮಂತ ಹೊಸಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ತಹಶೀಲ್ದಾರ್ ಸುರೇಶ ಅಂಕಲಗಿ ಘೋಷಣೆ ಮಾಡಿದ್ದಾರೆ.
ಈ ಹಿಂದೆ ಉಪಾಧ್ಯಕ್ಷರಾಗಿದ್ದ ಥಾವುರು ರಾಜಿನಾಮೆ ನೀಡಿದ ಪ್ರಯುಕ್ತ ಪಂಚಾಯತ್ ಸಭಾಂಗಣದಲ್ಲಿ ನಡೆದ ಉಪಾಧ್ಯಕ್ಷಸ್ಥಾನದ ಚುನಾವಣೆಯಲ್ಲಿ ಶೇಖರ್ ಹೊಸಳ್ಳಿ ಮಾತ್ರ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಸಭೆಯಲ್ಲಿಒಟ್ಟು 23 ಸದಸ್ಯರ ಪೈಕಿ, 20 ಪಂಚಾಯತ್ ಸದಸ್ಯರು ಭಾಗವಹಿಸಿದ್ದರು.
ಹೊಸಳ್ಳಿ ಆಯ್ಕೆಯಾದ ನಂತರ ಗ್ರಾ.ಪಂ ಅಧ್ಯಕ್ಷೆಅನ್ನಪೂರ್ಣಮ್ಮಅಮೀನರಡ್ಡಿ ಬಿಳ್ಹಾರ, ಪಂಚಾಯತ್ ಅಭಿವೃದ್ಧಿಅಧಿಕಾರಿ ನಿಂಗಣ್ಣ, ಸದಸ್ಯರಾದ ಅಮೃತರಡ್ಡಿ ಪಾಟೀಲ್, ಸಾಬರಡ್ಡಿ ತಮ್ಮಣ್ಣೋರ, ಸುಭಾಷ ನಾಯಕ, ಸಾಬಣ್ಣ ಸೋಮಣ್ಣೋರ, ಕೀರಲಿಂಗಗಣಪೂರ, ಮಲ್ಲಿಕಾರ್ಜುನಕಜ್ಜಿ, ಹಣಮಂತ ಸಮನಾಪೂರ, ಭೀಮರಾಯ ಬಾಚವಾರ, ಮುಖಂಡರಾದ ದೇವಿಂದ್ರಪ್ಪ ಖಂಡಪ್ಪನೋರ, ಸಾಬಣ್ಣ ಬಾವನೋರ, ಖುದಾನಸಾಬ್ ಇನಾಂದಾರ್, ದೇವು ಹೋರುಂಚಾ, ಮಲ್ಲುದೇವಕರ, ಸಿದ್ದು ನಾಯಕ, ಮಲ್ಲು ಬೂದೂರ, ಬಸ್ಸುಗೌಡಗೇರಿ, ಸುರೇಶ, ಸಣ್ಣಮೀರ ಯಾದವ್, ಅಂಬು ನಾಯಕ, ರಾಜುಗುಂಡೇನೋರ, ಹಣಮಂತ ಭೀಮಶಪ್ಪನೋರ, ಶ್ರೀಕಾಂತ ಬಾಚವಾರ ಹಲವರು ಅವರನ್ನು ಅಭಿನಂಧಿಸಿದರು.