ಯಾದಗಿರಿ | ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆಗೆ ತಹಶೀಲ್ದಾರ್ ಹುಸೇನಸಾಬ್ ಆದೇಶ
ಯಾದಗಿರಿ: ಜ.21 ರಂದು ತಾಲೂಕಿನ ಎಲ್ಲಾ ಕಚೇರಿಗಳಲ್ಲಿ, ಶಾಲಾ ಕಾಲೇಜು, ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸುವಂತೆ ತಹಶೀಲ್ದಾರ್ ಹುಸೇನಸಾಬ್ ಎ ಸರಕಾವಸ್ ತಿಳಿಸಿದರು.
ಸುರಪುರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂದು ಬೆಳಿಗ್ಗೆ ತಮ್ಮ ತಮ್ಮ ಕಚೇರಿಗಳಲ್ಲಿ ಆಚರಣೆ ಮಾಡಿ, ನಂತರ ಅಧಿಕಾರಿಗಳು ತಾಲೂಕು ಆಡಳಿತದಿಂದ ಆಚರಿಸಲಾಗುವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದರು.
ಕೋಲಿ ಕಬ್ಬಲಿಗ ಸಮಾಜದ ಅನೇಕ ಮುಖಂಡರು ಮಾತನಾಡಿ, ಅಂಬಿಗರ ಚೌಡಯ್ಯನವರ ಜಯಂತಿಯನ್ನು ನಗರದ ಬೋವಿಗಲ್ಲಿಯಲ್ಲಿನ ಅಂಬಿಗರ ಚೌಡಯ್ಯ ಭವನದಲ್ಲಿ ಆಚರಣೆ ಮಾಡುವಂತೆ ಮನವಿ ಮಾಡಿಕೊಂಡ ನಂತರ, ತಹಶೀಲ್ದಾರರು ಒಪ್ಪಿಗೆ ನೀಡಿ, ಅಂಬಿಗರ ಚೌಡಯ್ಯನವರ ಭವನದಲ್ಲಿ ತಾಲ್ಲೂಕು ಆಡಳಿತದ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಹಾಗೂ ಮುಖಂಡರಾದ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ದೇವಿಂದ್ರಪ್ಪ ಸಾಹುಕಾರ,ಮಾನಪ್ಪ ಸೂಗೂರ,ಪಾರಪ್ಪ ಗುತ್ತೇದಾರ, ವೆಂಕಣ್ಣ ಕಟ್ಟಿಮನಿ, ಹೊನ್ನಪ್ಪ ತಳವಾರ,ಮರೆಪ್ಪ ದಾಯಿ, ನಾಗರೆಡ್ಡಿ ರತ್ತಾಳ,ಯಲ್ಲಪ್ಪ ರತ್ತಾಳ, ಧರ್ಮರಾಜ, ಪ್ರಶಾಂತ, ವೆಂಕಟೇಶ ಚಟ್ನಳ್ಳಿ, ಆನಂದ ಮಾಚಗುಂಡಾಳ, ಮಲ್ಲು ವಿಷ್ಣು ಸೇನಾ, ಭಾಗೇಶ ಏವೂರ, ಸಂತೋಷ ಬಾಗಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.