ಯಾದಗಿರಿ | ಕಾರ್ಮಿಕರು, ಶ್ರಮಿಕರು ಸ್ಮಾರ್ಟ್ ಕಾರ್ಡ್ ಸದುಪಯೋಗ ಪಡೆದುಕೊಳ್ಳಿ : ಶಾಸಕ ತುನ್ನೂರ್
ಯಾದಗಿರಿ : ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ, ನಮ್ಮ ಸುತ್ತಲಿನ ಕೂಲಿ ಕಾರ್ಮಿಕರನ್ನು, ಶ್ರಮಿಕರನ್ನು ಗುರುತಿಸಿ, ಅವರ ಜೀವನಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಸ್ಮಾರ್ಟ್ ಕಾರ್ಡ್ ನೋಂದಾಯಿಸಿ, ಸದುಪಯೋಗ ಪಡೆದುಕೊಳ್ಳಿ ಎಂದು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ್ ಹೇಳಿದರು.
ನಗರದ ಎಪಿಎಂಸಿ ಗಂಜ್ ನಲ್ಲಿ ಕಾರ್ಮಿಕ ಇಲಾಖೆ ಆಯೋಜಿಸಿದ ಅಸಂಘಟಿತ, ಕೂಲಿ, ಕಾರ್ಮಿಕರಿಗೆ ನೀಡುವ ಸ್ಮಾರ್ಟ್ ಕಾರ್ಡ್ ಗಳನ್ನು ಫಲಾನುಭವಿಗಳಿಗೆ ನೀಡುವ ಮೂಲಕ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿದರು.
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯನ್ನು ಎಲ್ಲಾ ಶ್ರಮಿಕ ವರ್ಗದವರು ಉಪಯೋಗವನ್ನು ಪಡೆದುಕೊಳ್ಳಿ, ಉಚಿತವಾಗಿ ನೊಂದಾಯಿಸುವ ಮೂಲಕ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಹರಿ ದೇಸಪಾಂಡೆ ಜಿಲ್ಲಾ ಕಾರ್ಮಿಕ ಅಧಿಕಾರಿ ರಿಯಾಜ್ ಪಟೇಲ್ ವರ್ಕನಲಿ, ಬಾಲ ಕಾರ್ಮಿಕ ಯೋಜನಾ ನಿರ್ದೇಶಕರು ಹಾಗೂ ಮೋಹಿನುದ್ದಿನ್ ಮಿರ್ಚಿ ವಿಶ್ವನಾಥ್ ಠಾಣಾಗುಂದಿ, ಸಾಬಣ್ಣ ಕೆಂಗುರಿ, ಮಲ್ಲಣ್ಣ ಐಕುರ್, ತಿಮ್ಮಣ್ಣ ನಾಯಕ ಉಪಸ್ಥಿತರಿದ್ದರು.