ಯಾದಗಿರಿ | ಖುರೇಷಿ ಮೊಹಲ್ಲಾ ಶಾದಿ ಮಹಲ್ ಕಾಮಗಾರಿಗೆ ಅಡಿಗಲ್ಲು

Update: 2025-01-04 14:13 GMT

ಯಾದಗಿರಿ/ ಸುರಪುರ : ಕ್ಷೇತ್ರದ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬದ್ಧನಾಗಿದ್ದು, ಶಾಸಕನಾಗಿ ಆಯ್ಕೆಗೊಂಡ ನಂತರ ಕ್ಷೇತ್ರದಲ್ಲಿ ಹಿಂದೆ ಶಾಸಕರಾಗಿದ್ದ ನಮ್ಮ ತಾತಾನವರಾದ ದಿ.ರಾಜಾ ಕುಮಾರ ನಾಯಕ ಹಾಗೂ ತಂದೆಯವರಾದ ದಿ.ರಾಜಾ ವೆಂಕಟಪ್ಪ ನಾಯಕ ಅವರು ಹಾಕಿಕೊಟ್ಟ ಮಾರ್ಗದಂತೆ ನಡೆಯುತ್ತೇನೆ ನಿಮ್ಮ ಯಾವುದೇ ಕೆಲಸ ಕಾರ್ಯಗಳಿಗೆ ಸ್ಪಂದಿಸುತ್ತೇನೆ ಅಭಿವೃದ್ಧಿ ಕೈಗೊಳ್ಳಲು ಎಲ್ಲರ ಸಹಕಾರವಿರಲಿ ಎಂದು ಶಾಸಕ ರಾಜಾ ವೇಣುಗೊಪಾಲ ನಾಯಕ ತಿಳಿಸಿದರು.

ನಗರದ ಖುರೇಷಿ ಮೊಹಲ್ಲಾದಲ್ಲಿ ಶಾಸಕರ ಅನುದಾನದಲ್ಲಿ 25ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವ ಶಾದಿ ಮಹಲ್ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿ, ಹಿಂದೆ ನಮ್ಮ ತಂದೆ ಶಾಸಕರಾಗಿದ್ದಾಗ ಶಾಸಕರ ಅನುದಾನದಲ್ಲಿ ಶಾದಿ ಮಹಲ್ಗಾಗಿ 50ಲಕ್ಷ ರೂ. ಅನುದಾನ ಒದಗಿಸಲಾಗಿತ್ತು ಕಟ್ಟಡ ನಿರ್ಮಿಸಿದ್ದು, ಇದೇ ಕಟ್ಟಡದ ಮೊದಲನೇ ಅಂತಸ್ತು ನಿರ್ಮಾಣಕ್ಕಾಗಿ ಶಾಸಕರ ಅನುದಾನದಲ್ಲಿ 25ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದ ಅವರು, ಅಲ್ಪಸಂಖ್ಯಾತರ ಮೌಲಾನಾ ಅಬುಲ್ ಕಲಾಂ ಅಝಾದ್ ಶಾಲೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಕಟ್ಟಡ ನಿರ್ಮಿಸಲು ಅನುದಾನ ಮಂಜೂರಿಯಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಇದರಿಂದ ರಾಜ್ಯದ ಲಕ್ಷಾಂತರ ಜನರು ಪ್ರಯೋಜನ ಪಡೆದುಕೊಂಡಿದ್ದಾರೆ ಕಾಂಗ್ರೆಸ್ ಪಕ್ಷದ ಸರಕಾರದಿಂದ ಮಾತ್ರ ಎಲ್ಲಾ ವರ್ಗಗಳ ಜನರ ಅಭಿವೃದ್ಧಿ ಸಾಧ್ಯ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಮಾತನಾಡಿದರು. ಸುರಪುರ ಸಂಸ್ಥಾನದ ಅರಸು ವಂಶಸ್ಥರಾದ ರಾಜಾ ಕೃಷ್ಣಪ್ಪ ನಾಯಕ, ರಾಜಾ ವಾಸುದೇವ ನಾಯಕ, ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಮುಖಂಡರುಗಳಾದ ಅಬ್ದುಲ್ ಗಫಾರ ನಗನೂರಿ, ಮಹಿಬೂಬ ಒಂಟಿ, ಮಲ್ಲಣ್ಣ ಸಾಹುಕಾರ ನರಸಿಂಗಪೇಟ, ದುರ್ಗಪ್ಪ ಗೋಗಿಕೇರಾ, ಖಾಲೀದ್ ಅಹ್ಮದ ತಾಳಿಕೋಟಿ, ಶಕೀಲ್ ಅಹ್ಮದ, ಉಸ್ಮಾನಸಾಬ ಬಡೇಖುರೇಷಿ, ಉಸ್ಮಾನ ಪಾಶಾ, ಖಾಜಾ ಖಲೀಲ್ ಅಹ್ಮದ ಅರಕೇರಿ, ವೆಂಕಟರೆಡ್ಡಿ ಬೋಯಿ, ನಗರಸಭೆ ಎಇಇ ಶಾಂತಪ್ಪ ಹೂಸುರು, ಖುರೇಷಿ ಸಮಾಜದ ಅಧ್ಯಕ್ಷ ಅಬ್ದುಲ್ ಮಜೀದಸಾಬ, ನಗರಸಭೆ ಸದಸ್ಯರಾದ ನಾಸೀರ್ ಕುಂಡಾಲೆ, ಖಮರುದ್ದಿನ್, ಜುಮ್ಮಣ್ಣ ಕೆಂಗೂರಿ, ಶಿವಕುಮಾರ ಕಟ್ಟಿಮನಿ, ಸುವರ್ಣಾ ಸಿದ್ರಾಮ ಎಲಿಗಾರ, ಲಕ್ಷಿ ಮಲ್ಲು ಬಿಲ್ಲವ್, ಧರ್ಮರಾಜ ಮಡಿವಾಳರ ಹಾಗೂ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಹ್ಮದ ಪಠಾಣ ಹಾಗೂ ಮಹ್ಮದ ಜಹೀರ ಅಹ್ಮದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News