ಯಾದಗಿರಿ | ಡಾ.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆ

Update: 2024-12-06 13:30 GMT

ಯಾದಗಿರಿ : ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 68 ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಸೇರಿದಂತೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಇಡೀ ಜೀವನ ಸಮಾನತೆಗಾಗಿ ಹೋರಾಡಿದ ಜೊತೆಗೆ ವಿಶ್ವದ ಉತ್ಕೃಷ್ಟ ಸಂವಿಧಾನ ರಚಿಸುವ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಾನತೆ ಒದಗಿಸಿಕೊಟ್ಟಿದ್ದಾರೆ. ಇಂತಹ ಮಹಾನ್ ನಾಯಕರು ಸದಾ ಸ್ಮರಣೀಯರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಪಿ ಪೃಥ್ವಿಕ್ ಶಂಕರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ, ಸಮಾಜದ ಮುಖಂಡರಾದ ಮರೆಪ್ಪ ಚಟ್ಟೇರಕರ್, ಡಾ. ಭಗವಂತ ಅನವಾರ, ಮರೆಪ್ಪ ಬುಕ್ಕಲ್ ನಿಂಗಪ್ಪ ಬೀರನಾಳ, ಬಸಮ್ಮ ಮಹೇಶ ಕುರಕುಂಬಳಕರ್, ಮಂಜುನಾಥ ದಾಸನಕೇರಿ, ಸ್ವಾಮಿದೇವ ದಾಸನಕೇರಿ, ಗಾಲಿ ಪಟೇಲ್, ಮಂಜುನಾಥ ಗುರುಸಣಿಗಿ, ವಸಂತ ಸುಂಗಲಕರ್, ಸಂಪತ್ ಚಿನ್ನಾಕರ್, ಮರಿಲಿಂಗ ಕುರಕುಂ, ಸುರೇಶ್ ಬೊಮ್ಮನ್, ಚಂದ್ರಕಾಂತ ಚಲುವಾದಿ, ನಿಂಗಪ್ಪ ಹತ್ತಿಮನಿ, ಸುರೇಂದ್ರ ಬಬಲಾದ, ಮಲ್ಲಿಕಾರ್ಜುನ ಈಟೇ, ಮಹಾದೇವಪ್ಪ ಬಬಲಾದ, ಭೀಮಪ್ಪ ಕಾಗಿ, ಕಾಶಿನಾಥ ನಾಟೇಕಾರ್, ಗೌತಮ್ ಬಬಲಾದ, ಅಂಬ್ರೇಶ ಚಟ್ಟೇರಕರ್ ಸೇರಿದಂತೆ ಅನೇಕ ಮುಖಂಡರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News