ಯಾದಗಿರಿ | ವಿದ್ಯುತ್ ಅವಘಡ : ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಧನದ ಚೆಕ್ ವಿತರಣೆ

Update: 2024-12-07 15:33 GMT

ಯಾದಗಿರಿ: ವಿದ್ಯುತ್‌ ಅವಘಡದಿಂದಾಗಿ ಹಾನಿಯಾಗಿದ್ದ ಫಲಾನುಭವಿಗಳಿಗೆ ನಗರದ ತಮ್ಮ ಕಚೇರಿ ಆವರಣದಲ್ಲಿ ಸುರಪುರ ಶಾಸಕರಾದ ರಾಜಾ ವೇಣುಗೋಪಾಲ ನಾಯಕ ಅವರು ಪರಿಹಾರದ ಧನದ ಚೆಕ್ ವಿತರಿಸಿದರು.

ಈ ಸಮಯದಲ್ಲಿ ಮಾತನಾಡಿದ ಅವರು, ಸರಕಾರದಿಂದ ಲಭಿಸಿರುವ ಪರಿಹಾರ ಧನದ ಚೆಕ್ ಗಳನ್ನು ನೀಡಲಾಗುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಪರಿಹಾರ ಹಣವನ್ನು ವ್ಯರ್ಥ ಮಾಡದೇ ತಮ್ಮ ಜೀವನೋಪಯಾಕ್ಕೆ ಬಳಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸರಕಾರದ ಇಂಧನ ಇಲಾಖೆಯ ಸೂರ್ಯಘರ್ ಯೋಜನೆಯ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ವಿಠ್ಠಲ ಯಾದವ್, ಜೆಸ್ಕಾಂ ಇಇ ರಾಜಶೇಖರ, ಎಇಇ ರಫೀಕ್, ಎಇ ಅಂಬ್ರೀಶ, ಜೆಇ ಶಾಂತಪ್ಪ, ಮುಖಂಡರಾದ ಬಸವಂತರಾಯ ಹೆಮ್ಮಡಗಿ ಸೇರಿದಂತೆ ಇತರರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News