ಯಾದಗಿರಿ | ಶ್ರಮ ಶಕ್ತಿ ಕಟ್ಟಡ ಕಾರ್ಮಿಕರ ಯೂನಿಯನ್ ಉದ್ಘಾಟನೆ

Update: 2025-01-03 14:10 GMT

ಯಾದಗಿರಿ/ ಸುರಪುರ : ನಗರದ ರಂಗಂಪೇಟೆಯಲ್ಲಿ ನೂತನವಾಗಿ ಶ್ರಮ ಶಕ್ತಿ ಕಟ್ಟಡ ಮತ್ತು ಇತರೆ ನಿರ್ಮಾಣ ಅಸಂಘಟಿತ ಕಾರ್ಮಿಕ ಯೂನಿಯನ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮೈಲಾರಲಿಂಗೇಶ್ವರ ಎಮ್.ಎಸ್.ಡಬ್ಲೂ ಸ್ನಾತಕೋತ್ತರ ಮಹಾವಿದ್ಯಾಲಯದ ಪ್ರಾಂಶುಪಾಲ ಮಲ್ಲಿಕಾರ್ಜುನ ಕುಲಕರ್ಣಿ, ವಕೀಲ ಆನಂದರೆಡ್ಡಿ ಕೃಷ್ಣಾಪುರ, ಕರವೇ ಪ್ರವೀಣಶೆಟ್ಟಿ ಬಣದ ತಾಲ್ಲೂಕು ಅಧ್ಯಕ್ಷ ನಿಂಗಪ್ಪ ನಾಯಕ ಬಿಜಾಸಪುರ, ಪತ್ರಕರ್ತ ಮಲ್ಲಿಕಾರ್ಜುನ ಗುಳಗಿ, ಮುಖಂಡ ಅಬೀದ್ ಹುಸೇನ್ ಪಗಡಿ, ಕಾರ್ಮಿಕ ಇಲಾಖೆಯ ರಮೇಶ ಕುಮಾರ, ಪ್ರಸನ್ನ ಹೆಡಗಿನಾಳ ಭಾಗವಹಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾಗಿ ಸಯ್ಯದ್ ಹಾಫೀಜುರ ರಹಮಾನ್ (ಸರೋವರ) ಅಧ್ಯಕ್ಷ, ವಿರೇಶ ಕುಮಾರ ರುಮಾಲ ಉಪಾಧ್ಯಕ್ಷ, ಮಹ್ಮದ್ ಹುಸೇನ್ ಶಕ್ಲಿ ಪ್ರಧಾನ ಕಾರ್ಯದರ್ಶಿ, ಮಹ್ಮದ್ ರಿಯಾಜ್ ಖಜಾಂಚಿ, ತುರಬ್ ಅಲಿ ಸಂಘಟನಾ ಕಾರ್ಯದರ್ಶಿ ಹಾಗೂ ಮಹ್ಮದ್ ಹಸನ್, ವಿರೇಶ ಪುರತಗೇರಿ, ಶಶಿಧರ ವಿಭೂತೆ, ಅಶೋಕಕುಮಾರ, ಮಹ್ಮದ್ ಹಸನ್ ಪಟೇಲ್ ಸದಸ್ಯರಾಗಿ ನೇಮಕಗೊಳಿಸಲಾಯಿತು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News