ಯಾದಗಿರಿ | ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಡಿ.ಜಿ ಸಾಗರ ಬಣ ಸಭೆ

Update: 2024-12-08 13:59 GMT

ಯಾದಗಿರಿ : ಸುರಪುರ ನಗರದ ಟೇಲರ್ ಮಂಜಿಲ್ ನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಆದೇಶದ ಮೇರೆಗೆ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತಾಲ್ಲೂಕು ಮಟ್ಟದಲ್ಲಿ ಡಿ.6 ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 68 ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಕಾರ್ಯಕ್ರಮ ಆಯೋಜನೆ ಮಾಡುವುದು ಹಾಗಾ ತಾಲ್ಲೂಕಿನಲ್ಲಿ ವಿವಿಧ ಗ್ರಾಮ ಶಾಖೆ ಪಧಾದಿಕಾರಿಗಳನ್ನು ರಚನೆ ಮಾಡುವುದು ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಸುರಪೂರ ಹಾಗೂ ಹುಣಸಿಗಿ ತಾಲ್ಲೂಕು ಉಪ ವಿಭಾಗಿಯ ಸಂಚಾಲಕರಾಗಿ ರಮೇಶ ಬಡಿಗೇರ್ ಬಾಚಿಮಟ್ಟಿ ಯವರನ್ನು ನೇಮಕ ಮಾಡಿ ಜಿಲ್ಲಾ ಸಂಚಾಲಕರು ಆದೇಶ ಮಾಡಿದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶಿವಲಿಂಗ ಹಸನಾಪೂರ ಹಾಗೂ ತಾಲ್ಲೂಕು ಸಂಚಾಲಕರಾದ ತಿಪ್ಪಣ್ಣ ಶೆಳ್ಳಗಿ, ಚಂದ್ರಶೇಕರ್ ಬಲಶೆಟ್ಟಿಹಾಳ, ಮರೆಪ್ಪ ಕ್ರಾಂತಿ, ದೊಡಪ್ಪ ಕಾಡಂಗೇರಾ, ಮೈನಾರಿಟಿ ಸಂಚಾಲಕ ಎಂ.ಪಟೇಲ್ ,ಚನ್ನಬಸಪ್ಪ ದೇವಾಪೂರ, ಸಾಬಣ್ಣ ಸದಬ, ಸಿದ್ದಪ್ಪ ಝಂಡದಕೇರಾ, ಮಲ್ಲಪ್ಪ ಹೆಮನೂರ, ವೆಂಕಟೇಶ ದೇವಾಪೂರ, ಪಾರಪ್ಪ ದೇವತ್ಕಲ್, ಶೇಖರ ಮಂಗಳೂರ ,ರಾಜು ಬಡಿಗೇರ್, ಖಾಜಾ ಅಜ್ಮೀರ್ ,ಅಬ್ದುಲ್ ಅಲೀಂ, ಶರ್ಮುದ್ದೀನ್, ಚೌಡಪ್ಪ ಯಡಹಳ್ಳಿ, ಗೋಪಾಲ ಕಾಮನಟಿಗಿ, ಪರಮಣ್ಣ ಬಲಶೆಟ್ಟಿಹಾಳ, ಹಣಮಂತ ರತ್ತಾಳ, ಯಲ್ಲಪ್ಪ ರತ್ತಾಳ, ದೇವು ಬಡಿಗೇರ್, ಗುರಪ್ಪ ಮಾವಿನಮಟ್ಟಿ, ಶರಭಣ್ಣ ದೋರನಹಳ್ಳಿ, ಸಂತೋಷ ಗುಂಡಳ್ಳೀ, ನಾಗು ಕೊಡಮನಳ್ಳಿ, ಗುರು ಬಡಿಗೇರ್, ಶೀವು ದಿವಳಗುಡ್ಡ ,ಸುರೇಶ ಬಾದ್ಯಾಪೂರ್, ಮಲ್ಲು ಮೂಲಿಮನಿ, ಮಲ್ಲು ಜೇವರ್ಗಿ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News