ಯಾದಗಿರಿ | ಮಕ್ಕಳ ಸ್ನೇಹಿ ಗ್ರಂಥಾಲಯ ರೂಪಿಸುವಲ್ಲಿ ಗ್ರಂಥಪಾಲಕರ ಜವಾಬ್ದಾರಿ ಹೆಚ್ಚು : ಶಿವುಕುಮಾರ ಯಾದವ್

Update: 2024-12-08 16:33 GMT

ಯಾದಗಿರಿ : ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆ ಹಲವಾರು ಮಕ್ಕಳ ಸ್ನೇಹಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಮಕ್ಕಳ ಸ್ನೇಹಿ ಗ್ರಂಥಾಲಯವನ್ನು ರೂಪಿಸುವಲ್ಲಿ ಗ್ರಂಥಪಾಲಕರ ಜವಾಬ್ದಾರಿ ಪ್ರಮುಖವಾಗಿದ್ದು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಟಾಟಾ ಕಲಿಕೆ ಟ್ರಸ್ಟ್ ಶಿಕ್ಷಣ ವಿಭಾಗದ ಕಾರ್ಯಕ್ರಮ ಅಧಿಕಾರಿ ಶಿವುಕುಮಾರ ಯಾದವ್ ತಿಳಿಸಿದ್ದಾರೆ.

ಗದಗ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಸಭಾಭವನದಲ್ಲಿ ಜಿಲ್ಲಾಡಳಿತ ಯಾದಗಿರಿ, ಕಲಿಕೆ ಟಾಟಾ ಟ್ರಸ್ಟ್ ಮತ್ತು ಎಚ್ ಟಿ ಪಾರೇಖ್ ಪೌಂಡೇಷನ್ ಸಹಯೋಗದೊಂದಿಗೆ ಸುರಪುರ ಮತ್ತು ಹುಣಸಗಿ ತಾಲ್ಲೂಕಿನ 31 ಗ್ರಂಥಪಾಲಕರಿಗೆ ಮೂರು ದಿನಗಳ ವಸತಿ ಸಹಿತ ತರಬೇತಿಯಲ್ಲಿ ಮಾತನಾಡಿದರು.

3 ದಿನಗಳ ತರಬೇತಿ ಮಕ್ಕಳ ಸ್ನೇಹಿ ಚಟುವಟಿಕಗಳ ಬಗ್ಗೆ ಸಂವಹನ ನಡೆಸಲಾಯಿತು. ಈ ವೇಳೆ ಕಲಿಕ ಸಾಮಾಗ್ರಿಗಳನ್ನು ಪುಸ್ತಕಗಳನ್ನು ಹಾಗೂ ರಜಿಸ್ಟರ್ ಗಳನ್ನು ವಿತರಿಸಲಾಯಿತು.

ಈ ತರಬೇತಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ನಜೀರ್‌ ಅಹ್ಮದ್, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಅಲ್ಲಾವುದ್ದೀನ್, ವಿರೇಶ, ಅಂಜಲಪ್ಪ, ಲಕ್ಷ್ಮಣ, ಬಸವಲಿಂಗಯ್ಯ, ದೇವಿಂದ್ರಪ್ಪ ದೇಸಾಯಿ , ಗಂಗಧರ್ ನಾಯಕ, ರಾಘವೇಂದ್ರ ಸೇರಿದಂತೆ ಗ್ರಂಥಪಾಲಕರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News