ಯಾದಗಿರಿ | ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ಭತ್ತ, ಜೋಳ ಖರೀದಿಸಲು ನೋಂದಣಿ ಕೇಂದ್ರ ಆರಂಭ : ಜಿಲ್ಲಾಧಿಕಾರಿ

Update: 2024-12-07 12:17 GMT

ಯಾದಗಿರಿ : ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ-ಸಾಮಾನ್ಯ ಪ್ರತಿ ಕ್ವಿಂಟಾಲ್ 2,300 ರೂ. ಹಾಗೂ ‘ಎ’ ಗ್ರೇಡ್ ಪ್ರತಿಕ್ವಿಂಟಾಲ್ಗೆ 2,320 ರೂ. ರಂತೆ ಮತ್ತು ಬಿಳಿ ಜೋಳ ಹೈಬ್ರಿಡ್ ಪ್ರತಿ ಕ್ವಿಂಟಾಲ್ಗೆ 3,371 ರೂ. ಹಾಗೂ ಬಿಳಿ ಜೋಳ ಮಾಲ್ದಂಡಿ ಪ್ರತಿ ಕ್ವಿಂಟಾಲ್ಗೆ 3,421 ರೂ. ಖರೀದಿಸಲು ಈ ಕೆಳಕಂಡ ತಾಲ್ಲೂಕು ಕೇಂದ್ರಗಳಲ್ಲಿ ನೊಂದಣಿ ಕೇಂದ್ರ ತೆರೆಯಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕ್ ಫೊರ್ಸ್ ಸಮಿತಿ ಅಧ್ಯಕ್ಷರು ಡಾ.ಸುಶೀಲಾ ಬಿ. ತಿಳಿಸಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಯಾದಗಿರಿ, (ನೊಂದಣಿ ಕೇಂದ್ರ), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಸುರಪೂರ ಸಗಟು ಮಳಿಗೆ, ವೆಂಕಟಾಪುರ, (ನೋಂದಣಿ ಕೇಂದ್ರ), ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ, ಆವರಣ ಶಹಾಪೂರ, (ನೋಂದಣಿ ಕೇಂದ್ರ), ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ, ಟಿ.ಎ.ಪಿ.ಸಿ.ಎಂ.ಎಸ್. ಆವರಣ (ಮಹಾದೇವಪ್ಪ ಬಳೆ ಕಲ್ಯಾಣ ಮಂಟಪ ಎದುರುಗಡೆ, ತಾಳಿಕೋಟೆ ರಸ್ತೆ), (ನೋಂದಣಿ ಕೇಂದ್ರ) ಹುಣಸಗಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ನಾಯ್ಕಲ್ ಗ್ರಾಮ, (ನೋಂದಣಿ ಕೇಂದ್ರ)ದಲ್ಲಿ ಕೃಷಿ ಇಲಾಖೆಯವರು ಸಿದ್ದಪಡಿಸಿದ ಫ್ರೂಟ್ ಎಂಬ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರನ್ನು ನೊಂದಾಯಿಸಿಕೊಳ್ಳಲಾಗುವುದು, ಒಂದು ವೇಳೆ ಫ್ರೂಟ್ ತಂತ್ರಾಂಶದಲ್ಲಿ ತೊಂದರೆ ಇದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಂತ್ರಾಂಶದಲ್ಲಿ ಸರಿಪಡಿಸಿಕೊಂಡು ನೊಂದಣಿ ಮಾಡಿಕೊಳ್ಳಲು ತಿಳಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತ ಖರೀದಿಸಬೇಕಾಗಿರುವುದರಿಂದ ರೈತ ಭಾಂದವರು ನೊಂದಣಿ ಕೇಂದ್ರಗಳಲ್ಲಿ ದಿನಾಂಕ ನ.15 ರಿಂದ ಡಿ.31 ರ ವರೆಗೆ ನೊಂದಣಿ ಮಾಡಿಕೊಳ್ಳಲಾಗುವುದು ಹಾಗೂ ದಿನಾಂಕ ಜ.1,2025 ರಿಂದ ಮಾ.31, 2025 ರ ಅವಧಿಯವರೆಗೆ ಭತ್ತ ಖರೀದಿಸಲಾಗುವುದು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಇವರ ದೂ.ಸಂ.9844600893 ಹಾಗೂ ತಾಲ್ಲೂಕು ಖರೀದಿ ಕೇಂದ್ರಗಳ ಮೇಲ್ವಿಚಾರಕರುಗಳಾದ ಯಾದಗಿರಿ ತಾಲ್ಲೂಕು ಶ್ರೀ ವಿಠ್ಠಲ್ ಬಂದಾಳ ಮೊ.ನಂ.8971236664, ಶಹಾಪೂರ ತಾಲ್ಲೂಕು ಶ್ರೀ ಬಸವರಾಜ ಪತ್ತಾರ ಮೊ.ನಂ.8861819836, ಸುರಪೂರ ತಾಲ್ಲೂಕು ಶ್ರೀ ಆದಯ್ಯ ಹಿರೇಮಠ ಮೊ.ನಂ.8660813747, ಹುಣಸಗಿ ತಾಲ್ಲೂಕು ಶ್ರೀ ಸಿ.ಎಸ್.ರಾಜು ಮೊ.ನಂ.9632659336 ಹಾಗೂ ನಾಯ್ಕಲ್ ಹೋಬಳಿ ಶ್ರೀ ನಯೀಮ ಅಹ್ಮದ್ ಮೊ.ನಂ.6361852251ಗೆ ಸಂಪರ್ಕಿಸಬಹುದು.

ಜಿಲ್ಲೆಯ ರೈತಭಾಂದವರು ಸರಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News