ಯಾದಗಿರಿ | ಸಗರನಾಡಿಗೆ ಹಿರಿದಾದ ಇತಿಹಾಸವಿದೆ : ಸಾಹಿತಿ ರಾಜಶೇಖರ ಮಠಪತಿ
ಯಾದಗಿರಿ : ಸಗರನಾಡಿಗೆ ಹಿರಿದಾದ ಇತಿಹಾಸ ಭವ್ಯ ಪರಂಪರೆ, ಮಹತ್ತರವಾದ ಸಂಸ್ಕೃತಿ ಇದೆ ಎಂದು ನಾಡಿನ ಹಿರಿಯ ಸಾಹಿತಿ ರಾಜಶೇಖರ ಮಠಪತಿ (ರಾಗಂ) ಹೇಳಿದರು.
ಸುರಪುರ ಪಟ್ಟಣದ ಗರುಡಾದ್ರಿ ಕಲಾ ಮಂದಿರದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ದಶಮಾನೋತ್ಸವ ಸಮಾರಂಭದ ಸಮಾರೋಪ ಭಾಷಣ ಮಾಡಿದ ಅವರು ನಾಡಿನ ಕಲೆ, ಸಂಸ್ಕೃತಿ ಸಂಶೋಧನೆ, ಪರಂಪರೆ ಇತಿಹಾಸಕ್ಕೆ ಸಗರನಾಡಿನ ಕೊಡುಗೆ ಮಹತ್ತರವಾಗಿದೆ. ವಚನ ಸಾಹಿತ್ಯದ ಉಗಮ ಈ ನಾಡಿನದು, ಇಲ್ಲಿ ಭಕ್ತಿ ಇದೆ, ಭಾವೈಕ್ಯತೆ ಇದೆ, ಕಲೆ, ಸಂಸ್ಕೃತಿ ಸಾಹಿತ್ಯದ ತವನಿಧಿಯಾಗಿದೆ ಎಂದು ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷ ಅಪ್ಪಾರಾವ ಅಕ್ಕೋಣ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಹೆಚ್ ನಿರಗುಡಿ ಸಗರನಾಡು ಸೇವಾ ಪ್ರತಿಷ್ಠಾನದ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.
ದಶಮಾನೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಡಾ.ಸುರೇಶ ಆರ್.ಸಜ್ಜನ್ ಸಗರನಾಡ ಅವರು ಸಿರಿ ಸ್ಮರಣ ಗ್ರಂಥದ ಎಲ್ಲಾ ಲೇಖಕರಿಗೆ ಗೌರವ ಪ್ರತಿ ವಿತರಿಸಿದರು, ಸುರಪುರದ ನಿಷ್ಠಿ ಕಡ್ಲೆಪ್ಪನವರ ಮಠದ ಪೂಜ್ಯ. ಪ್ರಭುಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾಲ್ಲೂಕು ಕ.ಸಾ.ಪ ಮಾಜಿ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಬಸವರಾಜ ನಿಷ್ಠಿ ದೇಶಮುಖ, ಶ್ರೀನಿವಾಸ ಜಾಲವಾದಿ, ಲಿಂಗಣ್ಣ ಪಡಶೆಟ್ಟಿ ಸಗರ, ವಿವಿಧ ತಾಲ್ಲೂಕು ಕ.ಸಾ.ಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಹುಣಸಗಿ, ರವಿಂದ್ರ ಹೊಸಮನಿ ಶಹಾಪೂರ, ಶರಣಬಸಪ್ಪ ಯಾಳವಾರ ಸುರಪುರ, ಮಲ್ಲಿಕಾರ್ಜುನ ಕರಕಳ್ಳಿ ವಡಗೇರಿ, ಬಸವರೆಡ್ಡಿ ಎಂ.ಟಿ.ಪಲ್ಲಿ ಗುರುಮಿಠಕಲ್, ವೆಂಕಟೇಶ ಕಲಕಂಬ ಯಾದಗಿರಿ ಹಾಗೂ ಪ.ಮಾನು ಸಗರ, ನಿಂಗಣ್ಣಗೌಡ ದೇಸಾಯಿ, ಕನಕಪ್ಪ ವಾಗನಗೇರಿ, ಹೆಚ್.ರಾಠೋಡ್, ಪ್ರಕಾಶ ಚಂದ್ ಜೈನ್, ಚಂದ್ರಕಾಂತ ಮಾರ್ಗಲ್, ವಸಂತ ಬಣಗಾರ ಸೇರಿದಂತೆ ಇತರರಿದ್ದರು.
ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಡಾ.ಯಂಕಣ್ಣ ದೊಣ್ಣೆಗೌಡರು, ಡಾ.ವಾಸುದೇವ ಸೇಡಂ, ಡಾ.ಚಿ.ಸಿ.ನಿಂಗಣ್ಣ, ಡಾ.ಶರಣಬಸಪ್ಪ ವಡ್ಡನಕೇರಿ, ಡಾ.ಕೆ.ಗಿರಿಮಲ್ಲ, ಡಾ.ಎಸ್.ಎಸ್.ನಾಯಕ, ಡಾ.ಜಗದೀಶ ನೂಲಿನ್, ನಾಗರಾಜ ಜಮದ್ರಖಾನಿ, ನರಸಿಂಗರಾವ್ ಹೆಮನೂರ, ಗಣೇಶ ಚಿನ್ನಾಕಾರ, ಜನಾರ್ಧನ ಪಾಣ ಭಾತೆ, ಅಮರಪ್ರೀಯ ಹಿರೇಮಠ, ಶಿವಕುಮಾರ ಮಸ್ಕಿ, ನವೀನ ಜುಜಾರೆ ಸೇರಿದಂತೆ 50 ಜನ ವಿವಿಧ ಸಾಧಕರುಗಳಿಗೆ ಸನ್ಮಾನಿಸಲಾಯಿತು.
ದೇವು ಹೆಬ್ಬಾಳ ನಿರೂಪಿಸಿದರು. ಹಣಮಂತ್ರಯ ದೇವತ್ಕಲ್ ಸ್ವಾಗತಿಸಿ ವಂದಿಸಿದರು.