ಯಾದಗಿರಿ | ಡಾ.ಬಾಬು ಜಗಜೀವನರಾಮ್ ವೃತ್ತ ಉದ್ಘಾಟನೆ
Update: 2025-04-07 18:06 IST

ಸುರಪುರ : ನಗರದ ಹಳೆ ತಹಶೀಲ್ದಾರ್ ಕಚೇರಿ ಬಳಿಯಲ್ಲಿ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ ವೃತ್ತ ಉದ್ಘಾಟನೆ ಮಾಡಲಾಯಿತು.
ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್ ವೃತ್ತದ ನಾಮಫಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಾಧಿಕಾರಿ ಮಹ್ಮದ್ ಸಲೀಂ, ತಾ.ಪಂ ಇಒ ಬಸವರಾಜ ಸಜ್ಜನ್, ಅಕ್ಷರದಾಸೋಹ ನಿರ್ದೇಶಕ ಪಂಡೀತ ನಿಂಬೂರ, ಮುಖಂಡರಾದ ದಾನಪ್ಪ ಕಡಿಮನಿ,ಮರೆಪ್ಪ ಗುತ್ತೇದಾರ,ಯಲ್ಲಪ್ಪ ಹುಲಿಕಲ್, ಹಣಮಂತ ಕಟ್ಟಿಮನಿ, ನಿಂಗಣ್ಣ ಬುಡ್ಡಾ,ನಿಂಗಣ್ಣ ಗೋನಾಲ, ಭೀಮಣ್ಣ ದೀವಳಗುಡ್ಡಾ,ಬಲಭೀಮಣ್ಣ ಬೋನ್ಹಾಳ,ಕಾಂತಪ್ಪ ದೀವಳಗುಡ್ಡ,ಬಸವರಾಜ ಮುಷ್ಠಳ್ಳಿ,ಬಸವರಾಜ ಕೊಂಗಂಡಿ,ರಮೇಶ ಓಕಳಿ, ಬಾಪು ಕೋನ್ಹಾಳ, ಚಂದ್ರು ದೊಡ್ಮನಿ, ಮಾದಿಗ ದಂಡೋರ ಸಂಘಟನೆ ತಾ.ಅಧ್ಯಕ್ಷ ಬಸವರಾಜ ಹಾದಿಮನಿ, ಈಶ್ವರ ಕಟ್ಟಿಮನಿ, ಯಲ್ಲಪ್ಪ ಹೆಮ್ಮಡಗಿ, ಈಶ್ವರ ಸತ್ಯಂಪೇಟ, ಯಲ್ಲಪ್ಪ ಹೆಮ್ಮಡಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.