ಯಾದಗಿರಿ: ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು
Update: 2025-03-15 22:01 IST

ಯಾದಗಿರಿ: ಹೋಳಿ ಹಬ್ಬದಲ್ಲಿ ಬಣ್ಣವಾಡಿದ ನಂತರ ಗೆಳೆಯರ ಜೊತೆಯಲ್ಲಿ ಸ್ನಾನ ಮಾಡಲು ತೆರಳಿದ್ದ ಬಸವರಾಜ (28) ಎಂಬ ಯುವಕ ಕ್ವಾರಿ ಒಂದರಲ್ಲಿ ಮುಳುಗಿ ಶನಿವಾರ ಮೃತಪಟ್ಟ ಘಟನೆ ನಡೆದಿದೆ.
ವಡಿಗೇರಾ ತಾಲೂಕಿನ ಖಾನಾಪೂರ ಗ್ರಾಮದಲ್ಲಿ ಹೋಳಿ ಹಬ್ಬ ಮುಗಿಸಿಕೊಂಡು ಮೈ ತೊಳೆದು ಕೊಳ್ಳಲು ಹೋಗಿ ಕ್ವಾರಿ ಒಂದರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.