ಗಾಝಾ ಪಟ್ಟಿಯ ಮೇಲಿನ ಇಸ್ರೇಲ್ ದಾಳಿಯಲ್ಲಿ ಹತರಾದವಲ್ಲಿ 40% ಮಕ್ಕಳು!
ಎರಡು ವಾರಗಳ ಹಿಂದೆ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಬಳಿಕ ಇಸ್ರೇಲ್ ಆರಂಭಿಸಿರುವ ಯುದ್ಧದಿಂದಾಗಿ ಇದುವರೆಗೂ ಸುಮಾರು 5,087 ಅಧಿಕ ಫೆಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ
ಇಸ್ರೇಲ್ ದಾಳಿಯಲ್ಲಿ ಗಾಝಾದ 5 ಸಾವಿರಕ್ಕೂ ಹೆಚ್ಚು ಮಂದಿ ಸಾವು : 24 ಗಂಟೆಯಲ್ಲಿ 300 ಕ್ಕೂ ಹೆಚ್ಚು ವಾಯು ದಾಳಿ!
ಗಾಝಾ: ಎರಡು ವಾರಗಳ ಹಿಂದೆ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಬಳಿಕ ಇಸ್ರೇಲ್ ಆರಂಭಿಸಿರುವ ಯುದ್ಧದಿಂದಾಗಿ ಇದುವರೆಗೂ ಸುಮಾರು 5,087 ಅಧಿಕ ಫೆಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ ಎಂದು ಗಾಝಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
PHOTO : Aljazeera.com
PHOTO : Aljazeera.com
PHOTO : Aljazeera.com
ಮೃತಪಟ್ಟ 5,087 ಜನರಲ್ಲಿ ಸುಮಾರು 40 ಶೇಕಡಾ ಮಕ್ಕಳೇ ಸೇರಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಇಸ್ರೇಲ್‌ನ ಸೇನೆಯು 24 ಗಂಟೆಗಳಲ್ಲಿ 300 ಕ್ಕೂ ಹೆಚ್ಚು ಹೊಸ ವಾಯುದಾಳಿಗಳನ್ನು ನಡೆಸಿದೆ. ಆ ಅವಧಿಯಲ್ಲಿ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನಿನ ಅಧಿಕಾರಿಗಳು ತಿಳಿಸಿದ್ದಾರೆ. ಸಾವಿರಾರು ಕಟ್ಟಡಗಳು ನಾಶವಾಗಿದ್ದು, ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಈ ಪ್ರದೇಶಕ್ಕೆ ಇಸ್ರೇಲ್ ಸೇನೆಯಿಂದ ಮುತ್ತಿಗೆ ಹಾಕಿದ್ದು, ನೀರು, ಆಹಾರ ಮತ್ತು ಇತರ ಮೂಲಭೂತ ಸರಬರಾಜುಗಳು ಕಡಿತಗೊಂಡಿವೆ.
PHOTO : Aljazeera.com
ಇಸ್ರೇಲಿನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಇಸ್ರೇಲ್ ʼಹಮಾಸ್ ಅನ್ನು ನಿರ್ಮೂಲನೆ ಮಾಡಲಿದೆʼ ಎಂದು ಘೋಷಿಸಿದ ಬಳಿಕ ರಾತ್ರಿಯಿಡೀ ಗಾಝಾದತ್ತ ಇಸ್ರೇಲ್ ಸೇನೆ ಮುತ್ತಿಗೆ ಹಾಕಿದ್ದು, ಪೂರ್ಣ ಪ್ರಮಾಣದ ಆಕ್ರಮಣವನ್ನು ಮಾಡಿದೆ. ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್‌ನ ದಾಳಿಯಿಂದಾಗಿ ಕನಿಷ್ಠ 1,400 ಜನರು ಮೃತಪಟ್ಟಿದ್ದು, ಇದರಲ್ಲಿ ಹೆಚ್ಚಿನವರು ನಾಗರಿಕರು ಎಂದು ಇಸ್ರೇಲಿನ ಅಧಿಕಾರಿಗಳು ಹೇಳಿದ್ದಾರೆ.
PHOTO : Aljazeera.com
PHOTO : Aljazeera.com
PHOTO : Aljazeera.com
"ಇಸ್ರೇಲ್ ಸೇನೆಯ ಸೂಚನೆಯಂತೆ ನಾವು ತಾಲ್ ಅಲ್-ಹವಾದಿಂದ ರಫಾಗೆ ಸ್ಥಳಾಂತರಗೊಂಡಿದ್ದೇವೆ. ಆದರೂ ನಮ್ಮ ಮೇಲೆ ದಾಳಿ ನಡೆದಿದೆ. ನನ್ನ ಮಗ 3 ತಿಂಗಳ ಮಗು ಹುತಾತ್ಮನಾಗಿದ್ದಾನೆ" ಎಂದು ರಫಾದಲ್ಲಿ ನಡೆದ ದಾಳಿಯಲ್ಲಿ ಕೊಲ್ಲಲ್ಪಟ್ಟ ಮಗುವಿನ ತಂದೆ ತಿಳಿಸಿದರು ಎಂದು aljzeera.com ವರದಿ ಮಾಡಿದೆ.