ಹಜ್ ಯಾತ್ರೆಗೆ ಮುಂಗಡ ಪಾವತಿ ಅವಧಿ ಅ.31ರ ತನಕ ವಿಸ್ತರಣೆ

Update: 2024-10-21 16:42 GMT

ಮಂಗಳೂರು, ಅ.21: ಭಾರತದ ಹಜ್ ಕಮಿಟಿಯ ಮೂಲಕ ಮುಂದಿನ ವರ್ಷ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲು ಆಯ್ಕೆ ಯಾದವರಿಗೆ ಮುಂಗಡವಾಗಿ ಮೊದಲ ಕಂತಿನ ಹಣ ಪಾವತಿಸಲು ಅವಕಾಶವನ್ನು ಅ. 31ರ ರಾತ್ರಿ 11:59ರ ತನಕ ವಿಸ್ತರಿಸಲಾಗಿದೆ.

ಹಜ್ ಯಾತ್ರೆಗೆ ಈಗಾಗಲೇ ತಾತ್ಕಾಲಿಕವಾಗಿ ಆಯ್ಕೆಯಾದವರು 1,30,300 ರೂ. ಮುಂಗಡ ಹಣದ ಮೊದಲ ಕಂತನ್ನು ಅ.21ರ ಮೊದಲು ಪಾವತಿಸುವಂತೆ ಈ ಹಿಂದೆ ಹಜ್ ಕಮಿಟಿ ಆಫ್ ಇಂಡಿಯಾ ಅ.7ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿತ್ತು.

ಮೊದಲ ಕಂತು ಪಾವತಿ ದಿನಾಂಕವನ್ನು ವಿಸ್ತರಿಸುವಂತೆ ವಿವಿಧ ರಾಜ್ಯಗಳ ಹಜ್ ಕಮಿಟಿಗಳು ಮಾಡಿರುವ ಮನವಿಗೆ ಸ್ಪಂದಿಸಿರುವ ಹಜ್ ಕಮಿಟಿಯು ಇದೀಗ ಹಣ ಪಾವತಿಯ ಅವಧಿಯನ್ನು ವಿಸ್ತರಿಸಿದೆ.

ಮುಂಗಡ ಠೇವಣಿ ಮಾಡಿದ ಯಾತ್ರಿಕರು ನ.5ರೊಳಗೆ ತಮ್ಮ ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಹಜ್ ಸಮಿತಿಗಳಿಗೆ ಅಗತ್ಯದ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಹಜ್ ಕಮಿಟಿಯ ಸಿಇಒ ತಿಳಿಸಿದ್ದಾರೆ.

ಹಜ್ ಯಾತ್ರಿಕರು ಮುಂಗಡ ಹಜ್ ಮೊತ್ತದ ಠೇವಣಿ ಪಾವತಿಸಿ, ಸಂಬಂಧಪಟ್ಟ ರಾಜ್ಯ ಹಜ್ ಸಮಿತಿಗೆ ಸಲ್ಲಿಸಬೇಖಾದ ದಾಖಲೆಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸಬೇಕಾಗಿದೆ. ರಾಜ್ಯದ ಹಜ್ ಯಾತ್ರಿಕರು ಠೇವಣಿ ಪಾವತಿಸಿದ ಬಳಿಕ, ಆನ್‌ಲೈನ್‌ನಲ್ಲಿ ಅಫ್ಲೋಡ್ ಮಾಡಿರುವ ದಾಖಲೆಪತ್ರಗಳ ಪತ್ರಗಳನ್ನು ಬೆಂಗಳೂರಿನ ಹಜ್ ಕಚೇರಿಗೆ ತಲುಪಿಸ ಬೇಕಾಗಿದೆ. ದ.ಕ. ಜಿಲ್ಲೆಯ ಹಜ್ ಯಾತ್ರಿಕರು ಹಜ್‌ಗೆ ಸಂಬಂಧಿಸಿ ದಾಖಲೆ ಪತ್ರಗಳನ್ನು ಮುಡಿಪುವಿನ ಮಜ್ಲಿಸ್ ಎಜು ಪಾರ್ಕ್‌ನಲ್ಲಿರುವ ಜಿಲ್ಲಾ ಹಜ್ ಮಾಹಿತಿ ಕೇಂದ್ರಕ್ಕೆ ತಲುಪಿಸಿದರೆ ಅಲ್ಲಿಂದ ಬೆಂಗಳೂರಿನ ರಾಜ್ಯ ಹಜ್ ಕಚೇರಿಗೆ ತಲುಪಿಸ ಲಾಗುವುದು ಎಂದು ರಾಜ್ಯ ಹಜ್ ಸಮಿತಿಯ ಸದಸ್ಯ ಸಯ್ಯದ್ ಅಶ್ರಫ್ ತಂಙಳ್ ಆದೂರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News