ರೋಗಿ- ವೈದ್ಯರ ನಡುವಿನ ಸಂಬಂಧ ಚೆನ್ನಾಗಿರಲಿ: ಡಾ.ಶಿವಪ್ರಕಾಶ್

Update: 2024-10-21 15:41 GMT

ಮಂಗಳೂರು: ‘ವೈದ್ಯರ ಮೇಲೆ ಜನರ ನಿರೀಕ್ಷೆಗಳು ಹೆಚ್ಚುತ್ತಿವೆ. ರೋಗಿಗಳ ನಡುವಿನ ಸಂಬಂಧ ಹಾಳಾಗುತ್ತಿರುವುದನ್ನು ತಪ್ಪಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಕುಟುಂಬ ವೈದ್ಯರ ಅಗತ್ಯ ಇದೆ’ ಎಂದು ವೆನ್ಲಾಕ್ ಆಸತ್ರೆಯ ಶಸ್ತ್ರಚಿಕಿತ್ಸಕ ಡಾ.ಶಿವಪ್ರಕಾಶ್ ಡಿ.ಎಸ್. ಅಭಿಪ್ರಾಯಪಟ್ಟಿದ್ದಾರೆ.

ಕುಟುಂಬ ವೈದ್ಯರ ಸಂಘ ಸಂಘ ಮಂಗಳೂರು ಘಟಕದ ವಿಂಶತಿ ವರ್ಷದ ಅಂಗವಾಗಿ ಇಲ್ಲಿ ರವಿವಾರ ಐಎಂಎ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ‘ಕುಟುಂಬ ವೈದ್ಯ ಪದ್ಧತಿ ಅವಸಾನದತ್ತ’ ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಫಾರ್ಮುಲಾ ವನ್ ರೇಸ್‌ನಲ್ಲಿ ಹದಗೆಟ್ಟ ಕಾರನ್ನು ಕೆಲವೇ ಸೆಕೆಂಡ್‌ಗಳಲ್ಲಿ ದುರಸ್ತಿಗೊಳಿಸಿ ಮತ್ತೆ ರೇಸ್‌ಗೆ ಬಳಸಲಾಗು ತ್ತದೆ. ಅದೇ ರೀತಿ ವೈದ್ಯರೂ ಅದೇ ರೀತಿ ಸೇವೆ ನೀಡಬೇಕು ಎಂಬ ನಿರೀಕ್ಷೆ ಜನರಲ್ಲಿದೆ. ಜನರ ನಿರೀಕ್ಷೆಗೆ ವೈದ್ಯರು ಸ್ಪಂದಿಸಬೇಕು. ಅವರ ವಿಶ್ವಾಸವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ ಮಾತನಾಡಿ ‘ಎಂಬಿಬಿಎಸ್ ಶಿಕ್ಷಣ ಮುಗಿಸಿದವರಲ್ಲಿ ಶೇ 70ಕ್ಕೂ ಹೆಚ್ಚು ಮಂದಿ ಉನ್ನತ ಶಿಕ್ಷಣ ಪಡೆಯುತ್ತಾರೆ. ಇದರಿಂದ ಪ್ರಾಥಮಿಕ ಹಂತದ ವೈದ್ಯಕೀಯ ಸೇವೆಗೆ ಸಮಸ್ಯೆ ಉಂಟಾಗುತ್ತಿದೆ’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ, ‘ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಎಂಬಿಬಿಎಸ್ ಪೂರೈಸಿರುವ ವೈದ್ಯರೇ ಸಿಗುತ್ತಿಲ್ಲ. ಇದರ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದರು.

ಕೆಜಿಎಂಒಎ ಅಧ್ಯಕ್ಷ ಡಾ.ದೀಪಕ್ ರೈ, ವಕೀಲರಾದ ಪ್ರಥ್ವಿರಾಜ್ ರೈ, ಪತ್ರಕರ್ತ ರಾಘವ ಈ ಸಂದರ್ಬದಲ್ಲಿ ಮಾತನಾಡಿದರು.

‘ಆಸ್ಟಿಯೊಪೊರೋಸಿಸ್: ದುರ್ಬಲವಾದ ಮೂಳೆಗಳಿಗೆ ಚಿಕಿತ್ಸೆ’ ಎಂಬ ವಿಚಾರದಲ್ಲಿ ಡಾ. ಕೆ.ಆರ್.ಕಾಮತ್, ಡಾ.ಜೆಸ್ಸಿ ಮರಿಯಾ ಡಿ ಸೋಜ, ಡಾ.ಸದಾಶಿವ ಪೊಲ್ನಾಯ ವಿಚಾರ ಮಂಡಿಸಿದರು. ಡಾ.ಜೆ.ಎನ್.ಭಟ್ ಅಧ್ಯಕ್ಷತೆ ವಹಿಸಿದ್ದರು. ಡಾ.ಚಕ್ರಪಾಣಿ ಮತ್ತು ಡಾ.ಹೇಮಾವತಿ ಶ್ರೀನಿವಾಸನ್ ಕಾರ್ಯಕ್ರಮ ನಿರ್ವಹಿಸಿದರು.

ಸನ್ಮಾನ: ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷ ಡಾ.ಶ್ರೀನಿವಾಸ ಎಸ್, ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನ ಅಧ್ಯಕ್ಷ ಡಾ.ಯೋಗಾನಂದ ರೆಡ್ಡಿ ಸೇರಿದಂತೆ ಸಂಘದ ಪದಾಧಿಕಾರಿಗಳನ್ನು ಇದೇ ಸಂದರ್ಭ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಸನ್ಮಾನಿಸಿದರು.

ಸೈಂಟಿಫಿಕ್ ಅಧಿವೇಶನದಲ್ಲಿ ಆಂಧ್ರಪ್ರದೇಶ ಐಎಂಎಸಿಜಿಪಿ ನಿರ್ದೇಶಕ ಡಾ.ಪಿ.ಎಸ್.ಶರ್ಮ ವಿಷಯ ಮಂಡಿಸಿದರು. ಮೆಡಿಕಲ್ ಎಜ್ಯುಕೇಶನ್ ಇನ್ ರಿಜನಲ್ ಲಾಂಗ್ವೆಜ್ ’ ವಿಷಯದಲ್ಲಿ ಡಾ.ಪವನ್ ಪಾಟೆಲ್ , ಡಾ.ಸತೀಶ್ ಕಲ್ಲಿಮಾರ್ ಮಾತನಾಡಿದರು.

ಮೆಡಿಕಲ್ ಎಥಿಕ್ಸ್-ಲಾ ಸ್ಕೋಪ್ಸ್ ಆ್ಯಂಡ್ ಚಾಲೆಂಜ್ ಆಫ್ ಎಂಬಿಬಿಎಸ್ ಗ್ರಾಜ್ಯುವೆಟ್ಸ್’ ವಿಷಯದಲ್ಲಿ ಡಾ.ಶಿವಕುಮಾರ್ ಕುಂಬ್ರ, ಡಾ. ಮಹಾಬಲ ಶೆಟ್ಟಿ, ಡಾ.ಹರಿದಾಸ್ ರೈ, ಪಲ್ಲಿಟಿವ್ ಆ್ಯಂಡ್ ಜಿರಿಯಾಟ್ರಿಕ್ ಮೆಡಿಸಿನ್ ’ ವಿಷಯದಲ್ಲಿ ಡಾ.ರಮಾನಂದ ಬನಾರಿ ವಿಷಯ ಮಂಡಿಸಿದರು.

ಐಎಂಎಸಿಜಿಪಿ ನಿರ್ದೇಶಕ ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು , ಕಾರ್ಯದರ್ಶಿ ಡಾ. ಶೇಖರ ಪೂಜಾರಿ, ಡಾ.ಜಿ.ಕೆ. ಭಟ್, ಐಎಂಎ ಕರ್ನಾಟಕ ಘಟಕದ ಅಧ್ಯಕ್ಷ ಡಾ. ಕರುಣಾಕರ .ಬಿ.ಪಿ, ನಿಯೋಜಿತ ಅಧ್ಯಕ್ಷ ಡಾ.ವಿವಿ. ಚಿನಿವಾಲಾ, ಐಎಂಎ ಕೆಎಸ್‌ಬಿ ಮಾಜಿ ಅಧ್ಯಕ್ಷ ಡಾ.ಮಧುಸುಧನ್ ಕೆ, ಡಾ. ಅವೀನ್ ಆಳ್ವ, ಡಾ ಸವಿತಾ, ಡಾ.ಕೆಸ್.ಕಾರಂತ, ಡಾ.ಕುಮಾರಸ್ವಾಮಿ ಮಂಗಳೂರು, ಡಾ.ರಘರಾಮ ಶೆಟ್ಟಿ, ಡಾ.ಉಲ್ಲಾಸ್ ಕುಮಾರ್ ಶೆಟ್ಟಿ, ಡಾ.ನರಸಿಂಹ ಮೂರ್ತಿ, ಡಾ.ಪ್ರಭಾ ಅಧಿಕಾರಿ, ಡಾ.ಶಾಂತರಾಮ ಕಾಮತ್, ಡಾ.ಅಶೋಕ್ ಭಟ್ , ಡಾ.ರಂಜನ್ ಮತ್ತಿತರರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News