34 ನೆಕ್ಕಿಲಾಡಿ | ಮನೆ ಮೇಲೆ ಗುಡ್ಡ ಕುಸಿತ: ವಾಹನಗಳು ಜಖಂ

Update: 2024-08-02 04:17 GMT

ಉಪ್ಪಿನಂಗಡಿ:  34 ನೆಕ್ಕಿಲಾಡಿಯ ಆನೆಬೈಲು ಬಳಿಯ ಉಡ್ಲದಕೋಡಿ ಎಂಬಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದಿದ್ದು, ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. ವಾಹನಗಳು ಮಣ್ಣಿನಡಿ ಸಿಲುಕಿ ಜಖಂಗೊಂಡಿವೆ.

ಇಲ್ಲಿನ ವಿಶ್ವನಾಥ ನಾಯ್ಕ ಎಂಬವರ ಮನೆಯ ಹಿಂದಿನ ಗುಡ್ಡ ಇಂದು ನಸುಕಿನ ಜಾವ 4:15ರ ಸುಮಾರಿಗೆ ಕುಸಿದು ಮನೆಯ ಒಂದು ಪಾರ್ಶ್ವಕ್ಕೆ ಬಿದ್ದಿದೆ. ಇದರಿಂದ ಮನೆಗೆ ಸೇರಿಸಿ ಕಟ್ಟಲಾಗಿದ್ದ ಕೋಣೆ , ಸಿಮೆಂಟ್ ಶೀಟ್ ಸಂಪೂರ್ಣ ಹಾನಿಯಾಗಿದೆ. ಇಲ್ಲಿ ನಿಲ್ಲಿಸಲಾಗಿದ್ದ ಕಾರು, ದ್ವಿಚಕ್ರ ವಾಹನ ಮಣ್ಣಿನಡಿ ಸಿಲುಕಿ ಜಖಂಗೊಂಡಿದೆ.

ಸ್ಥಳಕ್ಕೆ 34 ನೆಕ್ಕಿಲಾಡಿ ಗ್ರಾಪಂ ಸದಸ್ಯ ಪ್ರಶಾಂತ್ ಎನ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News