ಅಡ್ಯಾರ್: ರಸ್ತೆ ಅಪಘಾತ; ಗಾಯಗೊಂಡಿದ್ದ ಯುವಕ ಮೃತ್ಯು
Update: 2024-12-30 08:28 GMT
ಮಂಗಳೂರು, ಡಿ.30: ನಗರ ಹೊರವಲಯದ ಅಡ್ಯಾರ್ ಕಣ್ಣೂರು ಸಮೀಪ ರವಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ.
ಮೃತ ಯುವಕನನ್ನು ಅಡ್ಯಾರ್ ಕಟ್ಟೆ ನಿವಾಸಿ ಅಬೂಬಕರ್ ಸಿದ್ದೀಕ್ (36) ಎಂದು ಗುರುತಿಸಲಾಗಿದೆ. ತೊಕ್ಕೊಟ್ಟು ಸಮೀಪದ ಕಲ್ಲಾಪು ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರು ರವಿವಾರ ಬೆಳಗ್ಗೆ ತನ್ನ ಮನೆಯಿಂದ ಕಲ್ಲಾಪು ಮಾರ್ಕೆಟ್‌ಗೆ ಟೆಂಪೋದಲ್ಲಿ ಹೊರಟಿದ್ದರು.
ಅಡ್ಯಾರ್ ಕಣ್ಣೂರು ಬಳಿ ತಲುಪುತ್ತಿದ್ದಂತೆಯೇ ಟೆಂಪೋದಲ್ಲಿದ್ದ ಟ್ರೇ ಯೊಂದು ಕೆಳಗೆ ಬಿತ್ತು ಎನ್ನಲಾಗಿದೆ. ಟೆಂಪೋ ನಿಲ್ಲಿಸಿ ಅದನ್ನು ತೆಗೆಯಲು ಮುಂದಾಗುತ್ತಿದ್ದಂತೆಯೇ ದ್ವಿಚಕ್ರ ವಾಹನವೊಂದು ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಸಿದ್ದೀಕ್ ಅವರನ್ನು ತಕ್ಷಣವೇ ಪಡೀಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.