ಬಿ.ಸಿ.ರೋಡ್ : ಢಿಕ್ಕಿ ಹೊಡೆದು ಪರಾರಿಯಾದ ವಾಹನ ಪತ್ತೆ ಹೆಚ್ಚುವಂತೆ ಮಿತ್ತಬೈಲ್ ಜಮಾಅತಿನಿಂದ ಪೊಲೀಸರಿಗೆ ಮನವಿ
ಬಿ.ಸಿ.ರೋಡ್ : ಮಿತ್ತಬೈಲ್ ಜಮಾಅತ್ ವ್ಯಾಪ್ತಿಯ ಶಾಂತಿ ಅಂಗಡಿ ಬಳಿ ರಸ್ತೆ ದಾಟುತ್ತಿದ್ದ ಇಬ್ಬರು ಬಾಲಕಿಯರಿಗೆ ಢಿಕ್ಕಿ ಹೊಡೆದು ಪರಾರಿಯಾದ ವಾಹನವನ್ನು ಪತ್ತೆ ಹೆಚ್ಚುವಂತೆ ಮಿತ್ತಬೈಲ್ ಜಮಾಅತ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಅದ್ದೇಡಿ ನೇತೃತ್ವದ ನಿಯೋಗ ಬಂಟ್ವಾಳ ನಗರ ಠಾಣಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಸೆ. 22 ರಂದು ಬಾಲಕಿಯರು ರಸ್ತೆ ದಾಟುತ್ತಿದ್ದ ವೇಳೆ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಘಟನೆಯಿಂದ ಒಂದೇ ಮನೆಯ ಇಬ್ಬರು ಬಾಲಕಿಯರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದು ಒಂದು ತಿಂಗಳು ಕಳೆದರೂ ಢಿಕ್ಕಿಯಾದ ವಾಹನ ಇದುವರೆಗೂ ಪತ್ತೆಯಾಗಿಲ್ಲ. ಆದುದರಿಂದ ತಕ್ಷಣ ತಪ್ಪಿತಸ್ಥ ಚಾಲಕ ಹಾಗೂ ವಾಹನವನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಹಾಗೂ ಕುಟುಂಬಸ್ಥರಿಗೆ ನ್ಯಾಯ ಒದಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜಮಾತ್ ಉಪಾಧ್ಯಕ್ಷ ಜಮಾಲ್, ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ, ಕೋಶಾಧಿಕಾರಿ ಅಬ್ದುಲ್ ರಹಿಮಾನ್, ಕಾರ್ಯದರ್ಶಿ ಅಶ್ರಫ್ ಶಾಂತಿಅಂಗಡಿ ಉಪಸ್ಥಿತರಿದ್ದರು.