ಬ್ಯಾರಿ ಅಕಾಡೆಮಿ : ‘ಬೆಲ್ಕಿರಿ’ ದ್ವೈಮಾಸಿಕಕ್ಕೆ ಲೇಖನ ಆಹ್ವಾನ

Update: 2024-10-09 07:40 GMT

ಸಾಂದರ್ಭಿಕ ಚಿತ್ರ (freepik)

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಭಾಷೆ, ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆಗಾಗಿ ಪ್ರತೀ 2 ತಿಂಗಳಿಗೊಮ್ಮೆ ಹೊರತರುವ ‘ಬೆಲ್ಕಿರಿ’ದ್ವೈಮಾಸಿಕ ಸಂಚಿಕೆಯಲ್ಲಿ ಪ್ರಕಟಿಸಲು ಬ್ಯಾರಿ ಇತಿಹಾಸ/ಸಂಶೋಧನಾ ಲೇಖನಗಳು, ಪುಸ್ತಕ ಪರಿಚಯ, ಮರೆಯಬಾರದ ಬ್ಯಾರಿ ಮಹನೀಯರು, ಕಥೆ/ಕವನ/ಚುಟುಕುಗಳನ್ನು ಆಹ್ವಾನಿಸಲಾಗಿದೆ. ಟೈಪ್ ಮಾಡಿ ಕಳುಹಿಸುವುದಾದರೆ ನುಡಿ/ಬರಹ ಫಾಂಟ್ನಲ್ಲಿ ಕಳುಹಿಸಬೇಕು. ಹೆಸರು ಮತ್ತು ವಿಳಾಸವಿಲ್ಲದ ಲೇಖನಗಳನ್ನು ಪ್ರಕಟಿಸಲಾಗುವುದಿಲ್ಲ. ಪ್ರಕಟಿತ ಲೇಖನಗಳ ಲೇಖಕರಿಗೆ ಗೌರವ ಸಂಭಾವನೆ ಪಾವತಿಸಲಾಗುವುದು.

ಆಸಕ್ತರು ತಮ್ಮ ಬರಹಗಳನ್ನು ಸಂಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಸಾಮರ್ಥ್ಯ ಸೌಧ, 2ನೇ ಮಹಡಿ, ಮಂಗಳೂರು ತಾಲೂಕು ಪಂಚಾಯತ್ ಹಳೇ ಕಟ್ಟಡ, ಮಿನಿ ವಿಧಾನಸೌಧದ ಬಳಿ, ಮಂಗಳೂರು 575001 ಅಥವಾ bearyacademy@yahoo.in ಅಥವಾ ಬೆಲ್ಕಿರಿ ದ್ವೈಮಾಸಿಕದ ಸಂಪಾದಕಿ ಹಫ್ಸಾ ಬಾನು ಬೆಂಗಳೂರು ('ವಾಟ್ಸ್ಯಾಪ್ ಸಂಖ್ಯೆ 9900762555ʼ ಗೆ ಅಥವಾ ಅಕಾಡೆಮಿಯ ವಾಟ್ಸಪ್ ನಂಬ್ರ 7483946578) ಇಲ್ಲಿಗೆ ಕಳುಹಿಸಿಕೊಡುವಂತೆ ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News