ಬೆಳ್ಳಾರೆ: ಬಾಲಕಿ ಮೇಲೆ ಅತ್ಯಾಚಾರ; ಪ್ರಕರಣ ದಾಖಲು

Update: 2023-11-14 04:10 GMT

ಸುಳ್ಯ: ಮೂತ್ರಶಂಕೆಗೆ ತೆರಳಿದ್ದ ಏಳು ವರ್ಷದ ಬಾಲಕಿಯನ್ನು ಯುವಕನೋರ್ವ ಅತ್ಯಾಚಾರ ನಡೆಸಲಾದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಾಣಿಯೂರು ಎಂಬಲ್ಲಿಂದ ವರದಿಯಾಗಿದೆ.

ಆರೋಪಿಯನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನಾಗೇಶ(24) ಎಂದು ಗುರುತಿಸಲಾಗಿದೆ.

ಈತ ಮಹಾರಾಷ್ಟ್ರದ ಕೂಲಿ ಕಾರ್ಮಿರರೋರ್ವರ ಏಳು ವರ್ಷದ ಮಗಳು ಮೂತ್ರಶಂಕೆಗೆ ತೆರಳಿದ್ದ ತೆರಳಿದ್ದ ವೇಳೆ  ಬಲವಂತವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಲಾಗಿದೆ. ಘಟನೆಯಲ್ಲಿ ಬಾಲಕಿ ರಕ್ತಸ್ರಾವಗೊಂಡು ತೀವ್ರವಾಗಿ ಅಸ್ವಸ್ಥಗೊಂಡಿರುವುದಾಗಿ ತಿಳಿದುಬಂದಿದೆ. ಬೆಳ್ಳಾರೆ ಠಾಣೆಯಲ್ಲಿ ಬಾಲಕಿಯ ಪೋಷಕರು ದೂರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News