ಬೆಳ್ತಂಗಡಿ: ಆ.7ರಿಂದ ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ

Update: 2023-08-06 16:51 GMT

ಬೆಳ್ತಂಗಡಿ: ಕುರಿಯ ವಿಟ್ಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಆ.7ರಿಂದ ಆ.13ರವರೆಗೆ ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ ಕಾರ್ಯಕ್ರಮ ಲಾಯ್ಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಭವನದಲ್ಲಿ ನಡೆಯಲಿದೆ.

ಪ್ರತಿದಿನ ಸಂಜೆ 6ರಿಂದ 9 ಗಂಟೆವರೆಗೆ ವಿದ್ವಾನ್ ಉಮಾಕಾಂತ ಭಟ್ಟ ಕೇರೆಕೈ ಅವರ ಪ್ರಧಾನಭೂಮಿಕೆಯ ಅರ್ಥ ಪ್ರಸ್ತುತಿಯೊಂದಿಗೆ ಯಕ್ಷಾವತರಣ 4 ನಡೆಯಲಿದ್ದು ರಾಮ, ವಸಿಷ್ಠ, ಕರ್ಣ, ಕೃಷ್ಣ, ವಿದುರ, ಅತಿಕಾಯ, ಕೃಷ್ಣ ಕೇಂದ್ರಿತ ಪ್ರಸಂಗಗಳು ನಡೆಯಲಿವೆ. ತೆಂಕು ಬಡಗಿನ ಪ್ರಸಿದ್ಧ ಕಲಾವಿದರು ಹಿಮ್ಮೇಳ ಮುಮ್ಮೇಳದಲ್ಲಿ ಭಾಗವಹಿಸಲಿದ್ದಾರೆ.

ಕೊರೋನ ಸಂದರ್ಭದಲ್ಲಿ ರೋಟರಿ ಕ್ಲಬ್, ಸ್ಥಾನಿಕ ಬ್ರಾಹ್ಮಣ ಸಭಾ, ಕುರಿಯ ಪ್ರತಿಷ್ಠಾನ ಜತೆಗೂಡಿ ಯಕ್ಷಾವತರಣ ತಾಳಮದ್ದಳೆ ಸಪ್ತಕ ಆರಂಭಿಸಿದ್ದು ಈಗ 4ನೇ ವರ್ಷಕ್ಕೆ ಕಾಲಿರಿಸಿದೆ. ವಿಟ್ಠಲ ಶಾಸ್ತ್ರಿ ಪ್ರತಿಷ್ಠಾನ ರಜತ ವರ್ಷ ಅಂಗವಾಗಿ ನಡೆಸುತ್ತಿರುವ ಸರಣಿ ತಾಳಮದ್ದಳೆಗಳ ಪೈಕಿ 104 ತಾಳಮದ್ದಳೆಗಳು ಈಗಾಗಲೇ ರಾಜ್ಯ ಹಾಗೂ ಹೊರರಾಜ್ಯದ ವಿವಿಧೆಡೆ ನಡೆದಿದ್ದು ಇದು ಸರಣಿಯ ಮುಂದುವರಿದ ಭಾಗವಾಗಿದೆ ಎಂದು ಕುರಿಯ ಪ್ರತಿಷ್ಠಾನದ ಸಂಚಾಲಕ ಅಶೋಕ ಭಟ್ ಎನ್.ಉಜಿರೆ, ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ಅಧ್ಯಕ್ಷ ಶಿವಾನಂದ ರಾವ್ ಕಕ್ಕಿನೇಜಿ, ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News