ಹರೇಕಳ ಡಿವೈಎಫ್‌ಐ ವತಿಯಿಂದ ರಕ್ತದಾನ ಶಿಬಿರ
ಉಳ್ಳಾಲ, ಅ.22 ಡಿವೈಎಫ್‌ಐ ಸಂಘಟನೆಯು ಪ್ರತೀ ವರ್ಷ ಸುಮಾರು 600ರಷ್ಟು ಯುನಿಟ್ ರಕ್ತ ಸಂಗ್ರಹಿಸಿ ಬಡರೋಗಿ ಗಳಿಗೆ ನೀಡುತ್ತಿವೆ. ಬಡರೋಗಿಗಳಿಗೆ ಅಗತ್ಯ ಸಂದರ್ಭ ರಕ್ತದ ಸಿಗುವುದು ಕಷ್ಟ. ಕೃತಕವಾಗಿ ತಯಾರಿಸಲಾಗದ, ಹಣ ಕೊಟ್ಟು ಖರೀದಿಸಲಾಗದ ರಕ್ತವನ್ನು ಶಿಬಿರಗಳ ಮೂಲಕ ಸಂಗ್ರಹಿಸುವ ಅಗತ್ಯವಿದೆ. ಈ ರಕ್ತಕ್ಕೆ ಬಣ್ಣ ಮಾತ್ರವಿದ್ದು, ಜಾತಿ, ಧರ್ಮವಿಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ ಎಂದು ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಹೇಳಿದರು.
ಡಿವೈಎಫ್‌ಐ ಹರೇಕಳ ಗ್ರಾಮ ಸಮಿತಿಯ ವತಿಯಿಂದ ಯೆನೆಪೊಯ ವೈದ್ಯಕೀಯ ಆಸ್ಪತ್ರೆಯ ಸಹಯೋಗದಲ್ಲಿ ಹರೇಕಳ ಡಿವೈಎಫ್‌ಐ ಕಚೇರಿಯಲ್ಲಿ ರವಿವಾರ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭ 48 ಬಾರಿ ರಕ್ತದಾನ ಮಾಡಿದ ಎಸ್ಸೆಸ್ಸೆಫ್ ಬ್ಲಡ್ ಸೈಬೋ ಅಧ್ಯಕ್ಷ ಮುನೀರ್ ಬೈತಾರ್‌ರನ್ನು ಸನ್ಮಾನಿಸಲಾ ಯಿತು. ಡಿವೈಎಫ್‌ಐ ಹರೇಕಳ ಗ್ರಾಮ ಸಮಿತಿಯ ಅಧ್ಯಕ್ಷ ಕೆ.ಎಚ್. ಇಕ್ಬಾಲ್ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ತಾಲೂಕು ಅಧ್ಯಕ್ಷ ರಝಾಕ್ ಮೊಂಟೆಪದವು ಮಾತನಾಡಿದರು.
ಡಿವೈಎಫ್‌ಐ ಉಳ್ಳಾಲ್ ವಲಯ ನಿಕಟಪೂರ್ವ ಅಧ್ಯಕ್ಷ ರಫೀಕ್ ಹರೇಕಳ, ಹರೇಕಳ ಗ್ರಾಪಂ ಸದಸ್ಯರಾದ ಅಶ್ರಫ್ ಹರೇಕಳ, ಅಬ್ದುಲ್ ಸತ್ತಾರ್ ಬಾವಲಿಗುರಿ, ಡಿವೈಎಫ್‌ಐ ಗ್ರಾಮ ಸಮಿತಿ ಕಾರ್ಯದರ್ಶಿ ಪಿ.ಎಚ್. ಹೈದರ್ ಆಲಡ್ಕ, ಮುಖಂಡರಾದ ಜನಾರ್ದನ, ಸುಂದರ, ಸತ್ತಾರ್ ಕೊಜಪಾಡಿ, ಕೆ.ಎಚ್.ಹಮೀದ್, ಯೆನೆಪೊಯ ರಕ್ತನಿಧಿ ವಿಭಾಗದ ಡಾ.ದಿಲೀಪ್ ಉಪಸ್ಥಿತರಿದ್ದರು.
ಡಿವೈಎಫ್‌ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು.