ದ.ಕ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ಮಹಾಸಭೆ, ಸನ್ಮಾನ
ಮಂಗಳೂರು, ಸೆ.26: ದ.ಕನ್ನಡ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಮಂಗಳೂರು ಇದರ ವಾರ್ಷಿಕ ಮಹಾಸಭೆ, ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಪಿಎಚ್.ಡಿ ಪದವಿ ಪಡೆದ ದಂಪತಿಗೆ ಸನ್ಮಾನ ಬಾಳಂ ಭಟ್ ಸಭಾಂಗಣ ದಲ್ಲಿ ರವಿವಾರ ನಡೆಯಿತು.
ಸಂಘದ ಅಧ್ಯಕ್ಷ ರವಿಪ್ರಸಾದ್ ನಾಯ್ಕ್ ಕಯ್ಯಾರು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಪತಿ ಪದಕ ಪುರಸ್ಕೃತ ಸೂಪರಿ ಟೆಂಡೆಂಟ್ ಆಫ್ ಪೊಲೀಸ್ ಹರಿಶ್ಚಂದ್ರ ನಾಯ್ಕ್, ಎಂಆರ್‌ಪಿಎಲ್ ಮುಖ್ಯ ಪ್ರಬಂಧಕ (ಆಡಳಿತ) ಸತೀಶ್ ಮುಖ್ಯ ಅತಿಥಿಗಳಾಗಿದ್ದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳನ್ನು ಹಾಗೂ ರಾಷ್ಟ್ರೀಯ ಯೋಗಪಟು ತನ್ವಿ ತಂಟೆಪ್ಪಾಡಿ ಅವರ ಸಾಧನೆಯನ್ನು ಗೌರವಿಸಲಾಯಿತು. ಪಿಎಚ್‌ಡಿ ಪಡೆದ ಡಾ.ದಿನೇಶ್ ಹಾಗೂ ಡಾ.ರಶ್ಮಿ ದಿನೇಶ್ ದಂಪತಿಯನ್ನು ಗೌರವಿಸಲಾಯಿತು.
ಹರಿಶ್ಚಂದ್ರ ನಾಯ್ಕ, ಸತೀಶ್ ಹಾಗೂ ಮರಾಟಿ ಭಾಷೆಯನ್ನು ಸಮುದಾಯಕ್ಕೆ ತಿಳಿಸುವ ಕೃಷ್ಣ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷ ಬಿ.ರಾಮನಾಯ್ಕ್ ನಟ್ಟಿ ಅವರು ಸಂಘದ ನಿವೇಶನ ಹಾಗೂ ಕಟ್ಟಡದ ಬಗ್ಗೆ ಮಾಹಿತಿ ನೀಡಿದರು.
2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಹಾಲಿಂಗ ನಾಯ್ಕ್ ಆಸ್ಪಿನ್‌ವಾಲ್ ನಡೆಸಿಕೊಟ್ಟರು. ಅಧ್ಯಕ್ಷ ರವಿಪ್ರಸಾದ್ ನಾಯ್ಕ, ಕಾರ್ಯದರ್ಶಿ ಮಹಾಲಿಂಗ ನಾಯ್ಕ್ ಗುರುಪುರ, ಕೊಶಾಧಿಕಾರಿ ಜಯಶಂಕರ್ ನಾಯ್ಕ್ ಹಾಗೂ ಕಾರ್ಯಕಾರಿ ಸಮಿತಿಗೆ 27 ಮಂದಿ, ಇಬ್ಬರು ಗೌರವ ಸಲಹೆಗಾರರು, ಮಹಿಳಾ ಅಧ್ಯಕ್ಷೆಯನ್ನು ಆಯ್ಕೆ ಮಾಡಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ನಾಯ್ಕ್ (ಆಸ್ಟಿನ್‌ವಾಲ್) ವರದಿ ವಾಚಿಸಿದರು. ಸುಂದರ ಲೆಕ್ಕಪತ್ರ ಮಂಡಿಸಿದರು. ವನಿತಾ ಸುಂದರ್ ಕಾರ್ಯಕ್ರಮ ನಿರೂಪಿಸಿದರು. ತನಿಯಪ್ಪ ನಾಯ್ಕ್ ವಂದಿಸಿದರು.