ದುಬೈ ಗಡಿನಾಡ ಉತ್ಸವದಲ್ಲಿ ಡಾ.ಫಕ್ರುದ್ದೀನ್ ಕುನಿಲ್‌ಗೆ 'ಗಡಿನಾಡ ಪ್ರಶಸ್ತಿ'

Update: 2024-10-25 02:37 GMT

ಮಂಗಳೂರು, ಅ.23: ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಯುಎಇ ಘಟಕದಿಂದ ಇತ್ತೀಚೆಗೆ ದುಬೈನ ಔದ್ ಮಥಾದಲ್ಲಿರುವ 'ಜೆಮ್' ಖಾಸಗಿ ಶಾಲೆಯಲ್ಲಿ ಆಯೋಜಿಸಲಾದ ದುಬೈ ಗಡಿನಾಡ ಉತ್ಸವದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗೆ ಪ್ರತಿಷ್ಠಿತ 'ಗಡಿನಾಡ ಪ್ರಶಸ್ತಿ'ಯನ್ನು ಕುನಿಲ್ ಗ್ರೂಪ್ ಅಧ್ಯಕ್ಷ ಡಾ.ಫಕ್ರುದ್ದೀನ್ ಕುನಿಲ್, ಅವರಿಗೆ ನೀಡಿ ಗೌರವಿಸಿತು.

35 ವರ್ಷಗಳ ಹಿಂದೆ ಕಾಸರಗೋಡು ಜಿಲ್ಲೆಯ ಶಿರಿಯಾ ಎಂಬ ಸಣ್ಣ ಗ್ರಾಮದಲ್ಲಿ ಡಾ.ಫಕ್ರುದ್ದೀನ್ ಕುನಿಲ್ ಅವರು ಶೈಕ್ಷಣಿಕ ಯಾತ್ರೆ ಪ್ರಾರಂಭಿಸಿದರು. ಬಳಿಕ ಬದಿಯಡ್ಕ, ನಾಟೆಕಲ್ ಮತ್ತು ತುಂಬೆಯಲ್ಲಿ ಕುನಿಲ್ ಶಾಲೆಗಳನ್ನು ಸ್ಥಾಪಿಸಿದರು. ನಾಲ್ಕು ಶಾಲೆಗಳಲ್ಲಿ 7,000 ವಿದ್ಯಾರ್ಥಿಗಳು, 600 ವೃತ್ತಿಪರ ಸಿಬ್ಬಂದಿ ಮತ್ತು 125 ಶಾಲಾ ವಾಹನಗಳೊಂದಿಗೆ ಈ ಶಾಲೆಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.

ಶೇ.100 ಫಲಿತಾಂಶವನ್ನು ನಿರಂತರವಾಗಿ ಕುನಿಲ್ ಶಾಲೆಗಳು ಸಾಧಿಸುತ್ತಿದ್ದು, ಇದು ಡಾ.ಫಕ್ರುದ್ದೀನ್ ಕುನಿಲ್ ಅವರ ಶಿಕ್ಷಣದಲ್ಲಿನ ಶ್ರೇಷ್ಠತೆಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News