ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಗಾಂಧೀ ಜಯಂತಿ , ಶಾಸ್ತ್ರೀ ದಿನಾಚರಣೆ

Update: 2023-10-02 13:16 GMT

ಮಂಗಳೂರು, ಅ.2: ಉತ್ತಮ ನಾಯಕತ್ವ, ಸರಳ ಜೀವನ, ಆದರ್ಶ ವ್ಯಕ್ತಿತ್ವದ ಮೂಲಕ ಜಗತ್ತಿನ ಶ್ರೇಷ್ಠ ನಾಯಕರಲ್ಲಿ ಶ್ರೇಷ್ಠರಾದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕನಸಾಗಿರುವ ನಮ್ಮ ಪರಿಸರ ಹಾಗೂ ದೇಶವನ್ನು ಸ್ವಚ್ಛಗೊಳಿಸುವ ಮೂಲಕ ಮಹಾತ್ಮರ ಕನಸನ್ನು ನನಸಾಗಿಸಬೇಕಾಗಿದೆ ಎಂದು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ವಂ.ರಾಬರ್ಟ್ ಡಿ ಸೋಜ ಹೇಳಿದ್ದಾರೆ.

ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಸೋಮವಾರ ಆಯೋಜಿಸಲಾದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡು ತ್ತಿದ್ದರು. ವೇದಿಕೆಯಲ್ಲಿ ಉಪಪ್ರಾಂಶುಪಾಲೆಯರಾದ ಬೆಲಿಟಾ ಮಸ್ಕರೇನ್ಹಸ್, ಅನಿತಾ ಥೋಮಸ್, ವಿದ್ಯಾರ್ಥಿ ನಾಯಕ ಅರ್ಜುನ್ ಕುಮಾರ್, ಉಪನಾಯಕಿ ಜೇನ್ ಮೊರಾಸ್, ಕ್ರೀಡಾ ನಾಯಕಿ ತನ್ವಿ ಭಟ್ ಮತ್ತು ಆರವ್ ಅಗರ್‌ವಾಲ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ಶ್ರವಣ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜೀವನ ಸಾಧನೆ, ಅವರು ಪ್ರಾರಂಭಿಸಿದ ಭಾರತೀಯ ನಾಗರಿಕ ಸೇವೆ, ಬಂಗಾಲದ ಬರಗಾಲದ ಸನ್ನಿವೇಶ, ‘ಜೈ ಜವಾನ್ ಜೈ ಕಿಸಾನ್’ ಇದರ ಮಹತ್ವವನ್ನು ತಿಳಿಸಿದರು.

ಬೆಳಗ್ಗಿನ ಪ್ರಾರ್ಥನಾ ಸಭೆಯಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ನಡೆಸಲಾಯಿತು. ಸ್ವಚ್ಛ ಭಾರತ ಅಭಿಯಾನ ಕಾಯರ್ರ್ಕ್ರಮದ ಅ0ಗವಾಗಿ ವಿದ್ಯಾರ್ಥಿಗಳಿಂದ ಶಾಲಾ ವಠಾರವನ್ನು ಸ್ವಚ್ಛಗೊಳಿಸಲಾಯಿತು.

ಮೆಲ್ರಿಕ್ ಸ್ಟೀವ್ ಲೋಬೊ ಸ್ವಾಗತಿಸಿ, ತನುಷಾ ಮಲ್ಲಿ ಗಾಂಧಿ ಜಯಂತಿಯ ಮಹತ್ವವನ್ನು ತಿಳಿಸಿದರು. ಆರ್ಯನ್ ಪೈ ಮತ್ತು ಆಸ್ತಾ ಅತ್ತಾವರ್ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕಿ ಗೌರಿ ರವಿ ಕಾರ್ಯಕ್ರಮವನ್ನು ಆಯೋಜಿಸಿದರು. ಲಿಡಿಯಾ ಡಿ ಸೋಜ, ಐವನ್ ಮಸ್ಕರೇನ್ಹಸ್, ರೋಶನ್ ಕೊರ್ಡೊರಿಯೊ ಮತ್ತು ರೋಶನ್ ಸಿಕ್ವೇರಾ ಸಹಕರಿಸಿದರು. ಸಮೈರಾ ಡಿ’ಸೋಜ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News