‘ಹಿರಾ’ದಲ್ಲಿ ಅಂತರ್ ಶಾಲಾ ಮಟ್ಟದ ಪ್ರತಿಭಾ ಅನ್ವೇಷಣೆ ಕಾರ್ಯಕ್ರಮ

Update: 2023-09-17 11:26 GMT

ಮಂಗಳೂರು, ಸೆ.17: ಶಾಂತಿ ಎಜುಕೇಶನಲ್ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಬಬ್ಬುಕಟ್ಟೆ ‘ಹಿರಾ’ದಲ್ಲಿ ಅಂತರ್ ಶಾಲಾ ಮಟ್ಟದ ಪ್ರತಿಭಾ ಅನ್ವೇಷಣೆ-2023 ಕಾರ್ಯಕ್ರಮವು ಶನಿವಾರ ನಡೆಯಿತು.

ಬಬ್ಬುಕಟ್ಟೆಯ ಹಿರಾ ಶಾಲೆ, ಬೆಂಗರೆಯ ಎಆರ್‌ಕೆ ಶಾಲೆ, ಕುದ್ರೋಳಿಯ ಬ್ರೈಟ್ ಮೋಡೆಲ್ ಶಾಲೆ, ಕೃಷ್ಣಾಪುರದ ಹಿರಾ ಶಾಲೆ ಪಕ್ಕಲಡ್ಕದ ಸ್ನೇಹ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಕೃಷ್ಣಾಪುರ ಹಿರಾ ಶಾಲೆ ಮತ್ತು ಪಕ್ಕಲಡ್ಕದ ಸ್ನೇಹ ಪಬ್ಲಿಕ್ ಸ್ಕೂಲ್ ತಂಡಗಳು ಜಂಟಿಯಾಗಿ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿತು.

ಶಾಂತಿ ಎಜುಕೇಶನಲ್ ಟ್ರಸ್ಟ್‌ನ ಉಪಾಧ್ಯಕ್ಷ ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಭಾಗವಹಿಸಿದ ಇಸಾಕ್ ಪುತ್ತೂರು ಮಾತನಾಡಿ ಯಾವ ಸ್ಪರ್ಧೆಯೇ ಆಗಲಿ. ಅದರಲ್ಲಿ ಒಳಿತಿರಬೇಕು, ನಿಷಿದ್ಧವಾದ ಕೆಲಸಗಳಿಂದ ದೂರ ಇರುತ್ತೇವೆ ಎಂಬುದು ನಮ್ಮ ನಿಲುವು ಆಗಿರಬೇಕು. ನಮ್ಮ ಕೆಲಸದಲ್ಲಿ ಶ್ರದ್ದೆ, ಆಸಕ್ತಿ ಇರಬೇಕು ಎಂದರು.

ಸ್ಪರ್ಧಾ ಸಂಚಾಲಕ ಇಬ್ರಾಹೀಂ ನಝೀರ್, ಕೃಷ್ಣಾಪುರ ಹಿರಾ ಪಬ್ಲಿಕ್ ಶಾಲಾ ಸಂಚಾಲಕ ಅಲ್ತಾಫ್ ಕೃಷ್ಣಾಪುರ, ಸ್ನೇಹ ಪಬ್ಲಿಕ್ ಶಾಲೆಯ ಸಂಚಾಲಕ ಯೂಸುಫ್, ಮುಖ್ಯ ಶಿಕ್ಷಕಿ ನುಸ್ರತ್, ಕುದ್ರೋಳಿ ಬ್ರೈಟ್ ಮೋಡಲ್ ಶಾಲೆಯ ಸಂಚಾಲಕ ಮುನಾವರ್, ಬಬ್ಬುಕಟ್ಟೆ ಹಿರಾ ಶಾಲೆಯ ಕಾರ್ಯದರ್ಶಿ ಅಬ್ದುಲ್ ಕರೀಂ, ಆಡಳಿತಾಧಿಕಾರಿ ಝಾಕಿರ್ ಹುಸೈನ್, ಹಿರಾ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಆಯಿಶಾ ಅಶ್ಮಿ, ಪಿಯು ಕಾಲೇಜಿನ ಪ್ರಾಂಶುಪಾಲೆ ಫಾತಿಮಾ ಮೆಹ್ರೂನ್, ಮುಖ್ಯ ಶಿಕ್ಷಕಿ ಮಂಜುಳಾ, ರೀನಾ ಉಪಸ್ಥಿತರಿದ್ದರು.

ಹಿರಾ ಶಿಕ್ಷಣ ಸಂಸ್ಥೆಯ ಸಂಚಾಲಕ ರೆಹ್ಮತುಲ್ಲಾಹ್ ಸ್ವಾಗತಿಸಿ, ವಂದಿಸಿದರು. ವಿದ್ಯಾರ್ಥಿ ಅಬ್ದುಲ್ ಲತೀಫ್ ಆಲಿಯಾ ಕಿರಾತ್ ಪಠಿಸಿದರು. ಮೌಲ್ಯ ಶಿಕ್ಷಣ ವಿಭಾಗದ ಮುಖ್ಯಸ್ಥ ಮೌಲನಾ ಶೋಯಬ್ ಹುಸೈನಿ ನದ್ವಿ ಪ್ರಾಸ್ತಾವಿಕ ಮಾತನಾಡಿದರು. ಶೀಮತ್ ಮತ್ತು ಹಸೀನಾ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News