ಅಖಿಲ ಭಾರತ ಬ್ಯಾರಿ ಪರಿಷತ್‌ನಿಂದ ವಿವಿಧ ಸ್ಪರ್ಧೆಗಳಿಗೆ ಆಹ್ವಾನ

Update: 2023-09-19 15:37 GMT

ಮಂಗಳೂರು, ಸೆ.19: ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಕೇಂದ್ರೀಯ ಸಮಿತಿ ಮಂಗಳೂರು ಇದರ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲು ಪರಿಷತ್ ಅಧ್ಯಕ್ಷ ಯು.ಎಚ್. ಖಾಲಿದ್ ಉಜಿರೆಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ ಮಾಸಿಕ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜೂನಿಯರ್ ವಿಭಾಗದಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸೀನಿಯರ್ ವಿಭಾಗದಲ್ಲಿ ಸಾರ್ವಜನಿಕರಿಗೆ ಬ್ಯಾರಿ ಆಶು ಭಾಷಣ, ಬ್ಯಾರಿ ಒಗಟು, ಬ್ಯಾರಿ ಪ್ರಬಂಧ, ಬ್ಯಾರಿ ಗಾಯನ ಹಾಗೂ ವಿಷಯಾಧಾರಿತ ಭಾಷಣ ಸ್ಪರ್ಧೆಗಳನ್ನು ಸೆ.24ರಂದು ನಗರದ ನ್ಯಾಷನಲ್ ಟ್ಯೂಟೋರಿಯಲ್‌ನಲ್ಲಿ ನಡೆಸಲಾಗುವುದು.

ವಿಜೇತರಿಗೆ ಅ. 3ರಂದು ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಏರ್ಪಡಿಸಲಾಗುವ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮ ದಲ್ಲಿ ನಗದು ಬಹುಮಾನ ಪ್ರಥಮ 1000 ರೂ. ದ್ವಿತೀಯ 750 ರೂ, ತೃತೀಯ 500 ರೂ. ವಿತರಿಸಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವವರು ಸೆ.23ರ ಸಂಜೆ 5ರೊಳಗೆ ತಮ್ಮ ಹೆಸರನ್ನು ನೋಂದಾಯಿಸಲು ಹಾಗೂ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಲು (ಇಬ್ರಾಹಿಂ ನಡುಪದವು-ಮೊ: 9448620793 ಮತ್ತು ಬಾದಶಾ ಸಾಂಬಾರಾತೋಟ ಮೊ: 9844014102 ಹಾಗೂ ಯು.ಎಚ್. ಖಾಲಿದ್ ಉಜಿರೆ ಮೊ:9845499527) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News