ಹಂಸಕಾವ್ಯ ರಾಷ್ಟ್ರೀಯ ಪುರಸ್ಕಾರಕ್ಕೆ ಕವನ ಸಂಕಲನಗಳಿಗೆ ಆಹ್ವಾನ

Update: 2023-11-12 13:52 GMT

ಮಂಗಳೂರು, ನ.12: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ‘ಹಂಸಕಾವ್ಯ ರಾಷ್ಟ್ರೀಯ ಪುರಸ್ಕಾರ’ಕ್ಕೆ ಕನ್ನಡ, ತುಳು, ಇಂಗ್ಲಿಷ್ ಹಿಂದಿ ಸಹಿತ ಭಾರತೀಯ ಭಾಷೆಯಲ್ಲಿ ಪ್ರಕಟಗೊಂಡಿರುವ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ.

ಈಗಾಗಲೇ ಪ್ರಶಸ್ತಿ ಪಡೆದುಕೊಂಡಿರುವ ಅಥವಾ ಪುರಸ್ಕಾರ ಘೋಷಿಸಲ್ಪಟ್ಟಿರುವ ಕವನ ಸಂಕಲನಗಳನ್ನು ಸ್ವೀಕರಿಸಲಾಗು ವುದಿಲ್ಲ. 2023ರಲ್ಲಿ ಪ್ರಕಟವಾದ ಸ್ವರಚಿತ ಕವನ ಸಂಕಲನಗಳನ್ನು ಮಾತ್ರ ತೀರ್ಪಿಗೆ ಪರಿಗಣಿಸಲಾಗುವುದು. ಹಕ್ಕು ಸ್ವಾಮ್ಯ ಲೇಖಕರದ್ದೇ ಆಗಿರಬೇಕು. ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು, ಫಲಕ, ಚಿನ್ನದ ಪದಕ ಮತ್ತು ಮಾನಪತ್ರ ಗಳನ್ನು ಒಳಗೊಂಡಿದೆ.

ಆಸಕ್ತರು ತಮ್ಮ ಕವನ ಸಂಕಲನದ 3 ಪ್ರತಿಗಳನ್ನು 2024ರ ಜನವರಿ 15ರೊಳಗೆ ‘ಕಾ.ವೀ.ಕೃಷ್ಣದಾಸ್, ಅಧ್ಯಕ್ಷರು, ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ, 107, ಶಿವಪ್ರಸಾದ್ ಗೋಲ್ಡ್ ಅಪಾರ್ಟ್ಮೆಂಟ್, ಲ್ಯಾಂಡ್‌ಲಿಂಕ್ಸ್ ಮುಖ್ಯರಸ್ತೆ, ಕೊಂಚಾಡಿ, ಮಂಗಳೂರು 575008ಕ್ಕೆ ಕಳಿಸಬಹುದು. ಮಾಹಿತಿಗಾಗಿ 8310388415ನ್ನು ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News