ಕಿನ್ನಿಗೋಳಿ: ಮಂಗಳೂರು ಉತ್ತರ ಕೆಥೊಲಿಕ್ ಸಭಾದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕಿನ್ನಿಗೋಳಿ, ಆ.22: ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಮಂಗಳೂರು ಉತ್ತರ ವಲಯ ಸಮಿತಿಯ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸುವ ಸಲುವಾಗಿ ʼಪ್ರತಿಭಾ ಪುರಸ್ಕಾರ 2023ʼ ಕಾಯಕ್ರಮವು ರವಿವಾರ ಪಕ್ಷಿಕೆರೆಯ ಸಂತ ಜೂದರ ಗೋಲ್ಡನ್ ಜುಬಿಲಿ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು.
ಸಮಾರಂಭದಲ್ಲಿ ಮಂಗಳೂರು ಉತ್ತರ ವಲಯದ ವ್ಯಾಪ್ತಿಯಲ್ಲಿ 2022-2023ನೇ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿರುವ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಅತ್ಯುತ್ತಮ ಸಾಧನೆಗೈದ ಪ್ರತಿಭಾವಂತ ಕೊಂಕಣಿ ಕೆಥೊಲಿಕ್ ವಿದ್ಯಾಥಿಗಳನ್ನು ಅಭಿನಂದಿಸಲಾಯಿತು.
ಮುಖ್ಯ ಅತಿಥಿಯಾಗಿ ಕಮರ್ಶಿಯಲ್ ಟ್ಯಾಕ್ಸಸ್ ಇನ್ ಸ್ಪೆಕ್ಟರ್ ಆಮ್ಲಿನ್ ಡಿಸೋಜ ಮಾತನಾಡಿ, ಯುವಜನರು ತಮ್ಮಲ್ಲಿರುವ ಸಾಮರ್ಥ್ಯವನ್ನು ಅರಿತು, ಸಮಾಜದ ಒಳಿತಿಗಾಗಿ ಶ್ರಮಿಬೇಕೆಂದು ಹೇಳಿದರು.
ಮಂಗಳೂರು ಉತ್ತರ ವಲಯದ ಅಧ್ಯಾತ್ಮಿಕ ನಿರ್ದೇಶಕ ಅತೀ ವಂ.ಫಾ.ಓಸ್ವಾಲ್ಡ್ ಮೊಂತೆರೊ ಕಾರ್ಯಕ್ರಮ ಉದ್ಘಾಟಿಸಿದರು. ಕೆಥೊಲಿಕ್ ಸಭಾ ಮಂಗಳೂರು ಉತ್ತರ ವಲಯ ಅಧ್ಯಕ್ಷ ಮೆಲ್ರೀಡ ಜೇನ್ ರೊಡ್ರಿಗಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂತ ಜೂದರ ಚರ್ಚಿನ ಧಮಗುರು ರೆ. ಫಾ.ಮೆಲ್ವಿನ್ ನೊರೊನ್ಹ, ಕೆಥೊಲಿಕ್ ಸಭಾ ಮಂಗಳೂರು ಧರ್ಮಪ್ರಾಂತದ ಅಧ್ಯಕ್ಷ ಆಲ್ವಿನ್ ಡಿಸೋಜ, ಪತ್ರಕರ್ತ ಹೇಮಾಚಾರ್ಯ, ಪಕ್ಷಿಕೆರೆ ಚರ್ಚ್ ಉಪಾಧ್ಯಕ್ಷೆ ಶೈಲಾ ಡಿಸೋಜ ಹಾಗೂ ಕಾರ್ಯದರ್ಶಿ ಸುನೀಲ್ ಮೊರಾಸ್, ಕೆಥೊಲಿಕ್ ಸಭಾ ಪಕ್ಷಿಕೆರೆ ಘಟಕದ ಅಧ್ಯಕ್ಷೆ ಲೂಸಿ ಡಿಸೋಜ ಹಾಗೂ ಕಾರ್ಯದರ್ಶಿ ಪ್ರೆಸ್ಸಿ ಪಿಂಟೊ ಮತ್ತು ಕೆಥೊಲಿಕ್ ಸಭಾ ಮಂಗಳೂರು ಉತ್ತರ ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮಾರಂಭದಲ್ಲಿ 37 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯದರ್ಶಿ ಪ್ರಮೀಳ ತಾವ್ರೊ ವಂದಿಸಿದರು. ನವೀನ್ ತಾವ್ರೊ ಕಾರ್ಯಕ್ರಮ ನಿರೂಪಿಸಿದರು.