ಕಿನ್ಯ: ಹಜ್ ಯಾತ್ರಿಕರಿಗೆ ತರಬೇತಿ ಶಿಬಿರ, ಬೀಳ್ಕೊಡುಗೆ

Update: 2024-05-16 09:55 GMT

ಉಳ್ಳಾಲ: ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಹಜ್,ಉಮ್ರಾ ಕರ್ಮಗಳ ವಿಧಿ ವಿಧಾನಗಳ ಬಗ್ಗೆ ಅರಿವು ಮೂಡಿಸುವ ತರಬೇತಿ ಶಿಬಿರ ಹಾಗೂ ಬೀಳ್ಕೊಡುಗೆ ಸಮಾರಂಭ ಕಿನ್ಯ ಬೆಳರಿಂಗೆ ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಬಿ.ಎಂ ಇಸ್ಮಾಈಲ್ ಹಾಜಿ ಪರಮಾಂಡ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಹನೀಫ್ ಸಖಾಫಿ ಖುತುಬಿನಗರ ಉದ್ಘಾಟಿಸಿದರು. ಹಾಜಿ ಉಸ್ಮಾನ್ ಸಅದಿ ಪಟ್ಟೋರಿ ತರಬೇತಿ ಶಿಬಿರವನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಕಿನ್ಯ ಪ್ರದೇಶದಿಂದ ಈ ವರ್ಷ ಹಜ್ಜ್ ಯಾತ್ರೆಗೆ ತೆರಳುವ ಕೆ.ಎಂ ಮೂಸ ಹಾಜಿ ಖುತುಬಿನಗರ,ಕೆ.ಎಂ ಅಬ್ಬುಚ್ಚ ಚಾದಿಪಡ್ಪು,ಕೆ.ಐ ಮುಹಮ್ಮದ್ ಚಾಕಟ್ಟೆಪಡ್ಪು,ಕೆ.ಎಂ ಇಸ್ಮಾಈಲ್ ಸಾಗ್,ಎಂ.ಎ ಮುಹಮ್ಮದ್ ಬಶೀರ್ ಬೆಲಿಯಪಡ್ಪು,ಕೆ.ಎಂ ಇಸ್ಮಾಈಲ್ ಕುರಿಯ, ಅಬ್ದುರ್ರಹ್ಮಾನ್ ಬೆಳರಿಂಗೆ ರವರಿಗೆ ಬೀಳ್ಕೊಡುಗೆ ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News