‘ಸ್ವಚ್ಛ ಗ್ರಾಮ’ ಪರಿಕಲ್ಪನೆ ಮನೆಯಿಂದ ಆರಂಭವಾಗಲಿ : ಡಾ. ಆನಂದ ಕೆ.
ಮಂಗಳೂರು: ಮನೆಯಲ್ಲೇ ಹಸಿ-ಒಣ ಕಸ ವಿಂಗಡನೆ ಕೆಲಸ ಸರಿಯಾಗಿ ನಡೆದಲ್ಲಿ, ಸಂಬಂಧಪಟ್ಟ ವ್ಯವಸ್ಥೆ ಮೂಲಕ ವಿಲೇವಾರಿ ಸುಲಭವಾಗುತ್ತದೆ. ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡು ವ್ಯವಹರಿ ಸಬೇಕು. ‘ಸ್ವಚ್ಛ ಗ್ರಾಮ’ ಪರಿಕಲ್ಪನೆ ಮನೆಯಿಂದ ಆರಂಭವಾಗಬೇಕು. ಸ್ವಚ್ಚತೆ ನಮ್ಮ ಜೀವನದ ಅವಿಭಾಜ್ಯ ವಿಷಯವಾಗ ಬೇಕು ಮತ್ತು ಅದು ನಮ್ಮ ಸಂಸ್ಕೃತಿಯಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಡಾ. ಆನಂದ ಕೆ. ಹೇಳಿದ್ದಾರೆ.
ಗುರುಪುರ ಪಂಚಾಯತ್‌ನಲ್ಲಿ ದ.ಕ. ಜಿ.ಪಂ ಮಂಗಳೂರು ತಾಲೂಕು ಪಂಚಾಯತ್ ಮತ್ತು ಗುರುಪುರ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಲಾದ ಬೃಹತ್ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಪಂಚಾಯತ್ ಅಧ್ಯಕ್ಷೆ ಸಫರಾ ಎಂ ಅಧ್ಯಕ್ಷತೆ ವಸಿದ್ದರು. ಪಂಚಾಯತ್ ಉಪಾಧ್ಯಕ್ಷ ದಾವೂದ್ ಬಂಗ್ಲೆಗುಡ್ಡೆ, ಗುರುಪುರ ಸರಕಾರ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಾಬು ಪಿ. ಎಂ, ಪಂಚಾಯತ್ ಕಾರ್ಯದರ್ಶಿ ಅಶೋಕ್, ಮಂಗಳೂರಿನ ಸ್ವಚ್ಛ ಭಾರತ್ ವಿಶನ್ ಐಇಸಿ ಸಂಯೋಜಕ ಡೊಂಬಯ್ಯ ಇಡ್ಕಿದು, ಕಂದಾಯ ನಿರೀಕ್ಷಕ ಪೂರ್ಣಚಂದ್ರ ತೇಜಸ್ವಿ, ಗಂಜಿಮಠದ ಗ್ರಾಮ ಲೆಕ್ಕಾಧಿಕಾರಿ ದಿನೇಶ್, ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿ ವರ್ಗ, ಅಂಗನವಾಡಿ ಮತ್ತು ಆಶಾ ಕಾರ್ಯ ಕರ್ತೆಯರು, ಗುರುಪುರ, ಕಿನ್ನಿಕಂಬಳ, ತಾರಿಕರಿಯ ಮತ್ತು ಅಡ್ಡೂರು ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ದೇವರಾಜ ಅರಸು ವಸತಿಗೃಹದ ವಿದ್ಯಾರ್ಥಿಗಳು,ಸ್ವಸಹಾಯ ಸಂಘಗಳ ಸದಸ್ಯೆಯರು, ಅಡ್ಡೂರಿನ ಫೈವ್ ಸ್ಟಾರ್‌ನ ಸದಸ್ಯರು, ಗ್ರಾಮಸ್ಥರು ಇದ್ದರು.
ಡಾ. ಆನಂದ ಕೆ ಅವರು ‘ಸ್ವಚ್ಛ ಗ್ರಾಮ, ಸ್ವಚ್ಛ ದೇಶ’ದ ಬಗ್ಗೆ ಪ್ರಮಾಣವಚನ ಬೋಧಿಸಿದರು. ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಮಹೇಶ್ ಅಂಬೆಕಲ್ಲು ನಿರೂಪಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಸ್ವಾಗತಿಸಿದರು. ಗುರುಪುರ ಪಂಚಾಯತ್ ಪಿಡಿಒ ವಂದಿಸಿದರು.