ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಶಿಬಿರ
ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪಾಲಿಟೆಕ್ನಿಕ್ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 'ಕೆರಿಯರ್ ಕ್ವೆಸ್ಟ್-ಡಿಸ್ಕವರ್ ಯುವರ್ ಫ್ಯೂಚರ್ (Career Quest-Discover Your Future) ಎಂಬ ಶೀರ್ಷಿಕೆಯಡಿ ವೃತ್ತಿ ಮಾರ್ಗದರ್ಶನ ಶಿಬಿರ ಬಿಐಟಿಯ ಅಂತರಾಷ್ಟ್ರೀಯ ಸೆಮಿನಾರ್ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರೊ. ಪೃಥ್ವಿರಾಜ್ ಅವರು ಸ್ವಾಗತಿಸಿದ್ದು, ಪಿಯುಸಿ ವಿಭಾಗದ ಪ್ರಾಂಶುಪಾಲರಾದ ಅಬ್ದುಲ್ ಲತೀಫ್ ಪ್ರಾಸ್ತಾವಿಕವಾಗಿ ಮಾತನಾಡಿದ್ದಾರೆ. ಡಾ.ಎಸ್.ಐ.ಮಂಝೂರ್ ಬಾಷಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣವನ್ನು ಮಾಡಿದ್ದು, ಡಾ.ಅಝೀಝ್ ಮುಸ್ತಫಾ ವಿದ್ಯಾರ್ಥಿಗಳ ಜೊತೆ ಸಂವಾದವನ್ನು ನಡೆಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದೇರಳಕಟ್ಟೆಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಾಬು ಶೆಟ್ಟಿ, ವಿದ್ಯಾರ್ಥಿಗಳಿಗೆ ಸರಿಯಾದ ವೃತ್ತಿ ಮಾರ್ಗ ಆಯ್ಕೆಯ ಮಹತ್ವವನ್ನು ಹೇಳಿಕೊಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢ ಶಾಲೆ ಪಾವೂರು, ಸರಕಾರಿ ಪ್ರೌಢ ಶಾಲೆ ನ್ಯೂ ಪಡ್ಪು, ನೇತಾಜಿ ಸರಕಾರಿ ಪ್ರೌಢ ಶಾಲೆ ದೇರಳಕಟ್ಟೆ, ಸರಕಾರಿ ಪ್ರೌಢ ಶಾಲೆ ಅಂಬ್ಲಮೊಗರು ಸೇರಿದಂತೆ ವಿವಿಧ ಶಾಲೆಗಳ ಸುಮಾರು 200 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅಫ್ಶಾನ್ ರವರು ಧನ್ಯವಾದವನ್ನು ಸಲ್ಲಿಸಿದ್ದು, ವಿದ್ಯಾರ್ಥಿನಿ ರಚನಾ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಾರೆ.