ಮಂಗಳೂರು: ಎಸ್. ಎಂ. ಇಬ್ರಾಹಿಮ್ ಅವರಿಗೆ ಅತ್ಯುತ್ತಮ ಉದ್ಯಮಿ ಪ್ರಶಸ್ತಿ
Update: 2024-12-03 07:26 GMT
ಮಂಗಳೂರು: ಮುರ್ಡೇಶ್ವರದಲ್ಲಿ ಮೀನುಗಾರಿಕಾ ಇಲಾಖೆ ವತಿಯಿಂದ ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಅತ್ಯುತ್ತಮ ಉದ್ಯಮಿ ಪ್ರಶಸ್ತಿ ಪಡೆದ ಸೀಫುಡ್ ಬಯ್ಯರ್ಸ್ ಸಂಸ್ಥೆಯ ಅಧ್ಯಕ್ಷ ಎಸ್ ಎಂ ಇಬ್ರಾಹಿಮ್ ಅವರಿಗೆ ಮಂಗಳೂರು ಅಲ್ಪಸಂಖ್ಯಾತ ಯಾಂತ್ರಿಕ ಮೀನುಗಾರರ ಗ್ರಾಹಕರ ಸಹಕಾರ ಸಂಘದ ವತಿಯಿಂದ ಡಿ.2 ಸೋಮವಾರ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದಲ್ಲಿ ಮಂಗಳೂರು ಅಲ್ಫ ಸಂಖ್ಯಾತ ಯಾಂತ್ರಿಕ ಮೀನುಗಾರರ ಗ್ರಾಹಕರ ಸಹಕಾರ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಬಿಎಸ್ಐಎಫ್, ಉಪಾಧ್ಯಕ್ಷ ಯು. ಎಂ. ಇಕ್ಬಾಲ್ ಯು ಎಫ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಸ್ಮಾನ್ ಮಾಲಿಕ್, ಹಾಜಿ ಬಶೀರ್ ಎ. ಎಫ್, ಬಾಷಾ ಎಸ್. ಎಂ ,ಜಾಫರ್ ಜೆಎಸ್ಎಫ್, ಹುಸೈನ್ ಎಂ ಎಚ್ ,ಅಹ್ಮದ್ ನಾಸಿರ್ ಬ್ಲೂ ಸ್ಟಾರ್ ಹಾಗೂ ಆಡಳಿತ ಸಂಸ್ಥೆಯ ಕಾರ್ಯಕಾರಿಣಿ ಸಮಿತಿ ಸದಸ್ಯರು ಉಪಸ್ಥಿತಿತರಿದ್ದರು.