ಮಂಗಳೂರು: ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾಟ; ಅಲೋಶಿಯಸ್ ಪ್ರಥಮ, ಯೆನೆಪೋಯ ತಂಡ ದ್ವಿತೀಯ

Update: 2023-09-18 16:21 GMT

ಮಂಗಳೂರು: ನಗರದ ಬದ್ರಿಯಾ ಪದವಿ ಪೂರ್ವ ಕಾಲೇಜು ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇದರ ಸಹಯೋಗದಲ್ಲಿ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟವನ್ನು ನೆಹರೂ ಮೈದಾನದಲ್ಲಿ ಸೋಮವಾರ ಆಯೋಜಿಸಲಾಯಿತು.

ಪ್ರಾಂಶುಪಾಲರಾದ ಸೀಮಾ ಅವರು ಸ್ವಾಗತಿಸಿದರು. ಅತಿಥಿಗಳಾದ ಮನ್ಸೂರ್ ಅಹ್ಮದ್ ಆಝಾದ್ ಗ್ರೂಪ್, ಅಲ್ ಫತ್ಹ್ ಮೆಡಿಕಲ್ ಸೆಂಟರ್ ಮಸ್ಕತ್ ಇದರ ನಿರ್ದೇಶಕರಾದ ಡಾ. ಜಾವೇದ್, ದೈಹಿಕ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಸುಧಾಕರ ಶೆಟ್ಟಿ, ಕೇರಳ ಫುಟ್ಬಾಲ್ ತಂಡದ ವ್ಯವಸ್ಥಾಪಕರಾದ ಪಿಸಿ ಆಸೀಫ್, ದಕ್ಷಿಣ ಕನ್ನಡ ಫುಟ್ಬಾಲ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಡಿಎಂ ಅಸ್ಲಾಂ ಮೊದಲಾದವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಕ್ರೀಡಾ ಪಟುಗಳಿಗೆ ಹಿತವಚನವನ್ನು ನೀಡಿದರು.

ಪಿ.ಸಿ ಗ್ರೂಪ್ ಇದರ ನಿರ್ದೇಶಕರಾದ ಪಿ.ಸಿ ಆಶಿರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅಧ್ಯಕ್ಷೀಯ ಭಾಷಣ ಮಾಡಿದರು.

ಪಂದ್ಯಾಟದಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದು, ಅಲೋಶಿಯಸ್ ತಂಡ ಪ್ರಥಮ ಸ್ಥಾನವನ್ನು ಪಡೆದಿದ್ದು ಯೆನೆಪೋಯ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ.

ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಬ್ದುಲ್ ಲತೀಫ್ ಕಾರ್ಪೋರೇಟರ್, ಆದಿಲ್ ಮೊಯ್ದಿನ್ ಮತ್ತು ಪ್ರಾಂಶುಪಾಲರಾದ ಸೀಮಾ ಮತ್ತು ಕಾರ್ಯಕ್ರಮದ ಸಂಯೋಜಕರಾದ ರೋಹಿತ್ ಮೊದಲಾದವರು ಉಪಸ್ಥಿತರಿದ್ದು, ಬಹುಮಾನ ವಿತರಿಸಿದರು.

ಕಾಲೇಜಿನ ಹಿಂದಿ ಉಪನ್ಯಾಸಕರಾದ ಲಿಯಾವುದ್ದೀನ್ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕರಾದ ಸಫ್ವಾನ್ ಕೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News