ಮುಲ್ಕಿ ಪಟ್ಟಣ ಪಂಚಾಯತ್‌: ಅಧ್ಯಕ್ಷರಾಗಿ ಸತೀಶ್ ಅಂಚನ್, ಉಪಾಧ್ಯಕ್ಷರಾಗಿ ಲಕ್ಷ್ಮೀ ಆಯ್ಕೆ

Update: 2024-08-23 16:39 GMT

ಮುಲ್ಕಿ: ಪಟ್ಟಣ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಪಟ್ಟಣ ಪಂಚಾಯತ್ ಸಭಾ ಭವನದಲ್ಲಿ ಶುಕ್ರವಾರ ನಡೆಯಿತು. ನೂತನ ಅಧ್ಯಕ್ಷರಾಗಿ ಸತೀಶ್ ಅಂಚನ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಲಕ್ಷ್ಮೀ ಅವರು ಆಯ್ಕೆಯಾಗಿದ್ದಾರೆ.

ಒಟ್ಟು 18 ಬಲಾಬಲದ ಮುಲ್ಕಿ ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್‌ 9, ಬಿಜೆಪಿ 8 ಮತ್ತು ಜೆಡಿಎಸ್‌ ಒಂದು ಸ್ಥಾನವನ್ನು ಪಡೆದಿತ್ತು. ರಾಜ್ಯ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಹೊಂದಾಣಿಕೆಯಿಂದಾಗಿ ಬಿಜೆಪಿ- ಕಾಂಗ್ರೆಸ್‌ ಬಲಾಬಲ 9-9 ಆಗಿತ್ತು. ಮತದಾನದಲ್ಲಿ ಸಂಸದ ಬೃಜೇಶ್‌ ಚೌಟ ಮತ್ತು ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಅವರ ಮತಗಳಿಂದಾಗಿ ಈ ಬಾರಿಯೂ ಮುಲ್ಕಿ ಪಟ್ಟಣ ಪಂಚಾಯತ್‌ ಬಿಜೆಪಿ ಪಾಲಾಯಿತು.

ಬಿಜೆಪಿ ಅಭ್ಯರ್ಥಿ ಸತೀಶ್ ಅಂಚನ್ ಅವರು ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಬಾಲಚಂದ್ರ ಕಾಮತ್ ಸ್ಪರ್ಧಿಸಿದ್ದರು. ಉಪಾಧ್ಯಕ್ಷರ ಗಾದಿಗೆ ಜೆಡಿಎಸ್ ಪಕ್ಷದ ಲಕ್ಷ್ಮಿ ಅವರು ವಿರುದ್ಧ ಕಾಂಗ್ರೆಸ್ ಪಕ್ಷದ ವಿಮಲಾ ಪೂಜಾರಿ ಸ್ಪರ್ಧಿಸಿದ್ದರು.

ಮುಲ್ಕಿ ನಗರ ಪಂಚಾಯತ್ ಆಡಳಿತ ಅಧಿಕಾರಿ ಪ್ರದೀಪ್ ಕುರ್ಡೇಕರ್, ಉಪತಹಶೀಲ್ದಾರ್ ದಿಲೀಪ್ ರೋಡ್ಕರ್, ನಗರ ಪಂಚಾಯತ್ ಮುಖ್ಯಾಧಿಕಾರಿ ಮಧುಕರ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News