ವಿವಾಹಿತೆ ನಾಪತ್ತೆ: ಪ್ರಕರಣ ದಾಖಲು

Update: 2023-10-05 16:00 GMT

ಮಂಗಳೂರು,ಅ.5: ನಗರ ಹೊರವಲಯದ ವಾಮಂಜೂರು ಸಮೀಪದ ಅಮೃತ ನಗರ ಎಂಬಲ್ಲಿ ವಾಸವಾಗಿದ್ದ ನಿಹಾ ಫರ್ವೀನ್ (34) ಎಂಬಾಕೆ ಅ.1ರಿಂದ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಾರು 5.2 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಶರೀರ, ದುಂಡು ಮುಖ ಹೊಂದಿರುತ್ತಾರೆ. ನಾಪತ್ತೆಯಾದ ದಿನ ಕಪ್ಪು ಬಣ್ಣದ ಚೂಡಿದಾರ ಧರಿಸಿದ್ದು, ಹಿಂದಿ, ತುಳು, ಉರ್ದು, ಕನ್ನಡ ಭಾಷೆ ಮಾತನಾಡುತ್ತಾರೆ.

ಈಕೆಯನ್ನು ಕಂಡವರು ಮಂಗಳೂರು ಗ್ರಾಮಾಂತರ ಠಾಣೆ (0824-2220535), ಪೊಲೀಸ್ ಕಂಟ್ರೋಲ್ ರೂಂ (0824- 2220800), ಪೊಲೀಸ್ ನಿರೀಕ್ಷಕರು (9480805330)ರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News