ಬನತ್ತಡಿ : ಸಾರ್ವಜನಿಕ ಬಸ್ ತಂಗುದಾಣ ಲೋಕಾರ್ಪಣೆ

Update: 2023-10-08 16:49 GMT

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಬನತ್ತಡಿ ಪ್ರದೇಶದಲ್ಲಿ ಪಟ್ಟಣ ಪಂಚಾಯತ್ ಅನುದಾನದಿಂದ ನೂತನ ಸಾರ್ವಜನಿಕ ಬಸ್ ತಂಗುದಾಣ ಲೋಕಾರ್ಪಣೆ ಕಾರ್ಯಕ್ರಮ ರವಿವಾರ ನಡೆಯಿತು.

ಬಸ್ ತಂಗುದಾಣವನ್ನು 13ನೇ ವಾರ್ಡಿನ ಕೌನ್ಸಿಲರ್ ಸಲಿಮಾಬಿ.ಎಂ.ರವರು ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಬಾವು ಉಕ್ಕುಡ ,ಶೇಕಬ್ಬಾ ಹಾಜಿ,ನಬಾವು ಪಡ್ಪು, ಕಿನ್ಯಾ ಪಂಚಾಯತ್ ಸದಸ್ಯರಾದ ತ್ವಾಹ ತಂಙಲ್, ಮಂಜನಾಡಿ ಪಂಚಾಯತ್ ಸದಸ್ಯರಾದ ಶಾಕೀರ್, ಸಂಶು ಅಜ್ಜಿನಡ್ಕ, ಕಲಂದರ್ ಉಕ್ಕುಡ, ಶಾಕೀರ್ ಪನೀರ್, ಅಝರ್ ಪನೀರ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News