ನೆಲ್ಲಿಗುಡ್ಡೆ ನೂರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷರಾಗಿ ಪಿ.ಅಬೂಬಕರ್ ಪುನರಾಯ್ಕೆ
ಬಂಟ್ವಾಳ, ಜ.18: ವಿಟ್ಲ ಸಮೀಪದ ನೆಲ್ಲಿಗುಡ್ಡೆ ನೂರುಲ್ ಹುದಾ ಜುಮಾ ಮಸೀದಿ ಹಾಗೂ ಮದ್ರಸ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಪಿ.ಅಬೂಬಕರ್ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.
ಮಸೀದಿ ಆಡಳಿತ ಸಮಿತಿಯ ಗೌರವಾಧ್ಯಕ್ಷ ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್-ಬುಖಾರಿ ಕೂರತ್ ನೇತೃತ್ವದಲ್ಲಿ ನಡೆದ ಮಸೀದಿಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
2024-2026ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ನೂತನ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಕೊಪ್ಪಳ, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಾಕ್ ಬೇಗ್, ಕೋಶಾಧಿಕಾರಿಯಾಗಿ ಮುಹಮ್ಮದ್ ನೆಕ್ಕರೆಕಾಡು, ಲೆಕ್ಕ ಪರಿಶೋದಕರಾಗಿ ಎನ್.ಕೆ.ಅಬ್ದುಲ್ ರಝಾಕ್, ಜೊತೆ ಕಾರ್ಯದರ್ಶಿಗಳಾಗಿ ಹಂಝತ್ ವಿ.ಎಸ್., ಅಬ್ದುಲ್ ಖಾದರ್ ನೆಲ್ಲಿಗುಡ್ಡೆ ಆಯ್ಕೆಯಾದರು.
ಹಿರಿಯರಾದ ಕುಂಞಿಮೋನು, ಇಬ್ರಾಹೀಂ ಕೊಪ್ಪಳ, ವಿ.ಅಬ್ದುಲ್ ರಹಿಮಾನ್ (ಹಸೈನಾರ್) ನೆಲ್ಲಿಗುಡ್ಡೆ, ಝುಬೈರ್, ಎಸ್.ಐ. ಅಬ್ದುಲ್ ರಹಿಮಾನ್, ರಫೀಕ್ ಶಾಲಾ ಬಳಿ, ಹನೀಫ್ ಎನ್.ಕೆ. ಅವರನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಮುಸ್ತಾಕ್ ಬೇಗ್ ಸ್ವಾಗತಿಸಿ, ವಂದಿಸಿದರು.