ಮಂಗಳೂರಿನಲ್ಲಿ ರ್ಯಾಂಬೊ ಸರ್ಕಸ್

Update: 2024-04-02 15:24 GMT

ಮಂಗಳೂರು,ಎ.೨: ಮೈನವಿರೇಳಿಸುವ ಹೊಸ ಪ್ರಯೋಗಗಳೊಂದಿಗೆ ದಿಲ್ಲಿ, ಮುಂಬೈ, ಬೆಂಗಳೂರು, ಗೋವಾ ಹಾಗೂ ಇನ್ನೂ ಹಲವಾರು ಮಹಾನಗರಿಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ನೀಡಿರುವ ರ್ಯಾಂಬೋ ಸರ್ಕಸ್ ಇದೀಗ ಮಂಗಳೂರಿಗೂ ಆಗಮಿಸಿದೆ.

ಮಂಗಳೂರಿನ ಬಂಗ್ರಕೂಳೂರು ಗೋಲ್ಡ್‌ಫಿಂಚ್ ಸಿಟಿಯ ಎದುರುಗಡೆಯ ಡೆಲ್ಟಾಗ್ರೌಂಡ್‌ನಲ್ಲಿ ಮಾರ್ಚ್ 31ರಂದು ಆರಂಭಗೊಂಡಿದೆ.

ವಿಶ್ವವಿಖ್ಯಾತ ರ್ಯಾಂಬೊ ಸರ್ಕಸ್ ತನ್ನ ಪೂರ್ಣ ಪ್ರಮಾಣದ ಮೋಡಿ ಮಾಡುವ 120 ನಿಮಿಷಗಳ ನವೀನ ಮಾದರಿಯ ಸರ್ಕಸನ್ನು ಪ್ರದರ್ಶಿಸುತ್ತಿದೆ. ರ್ಯಾಂಬೊ ತಂಡವು ಬಬಲ್ ಶೋ, ಸ್ಕೇಟಿಂಗ್, ಲ್ಯಾಡರ್ ಬ್ಯಾಲೆನ್ಸ್, ಸ್ವಾರ್ಡ್‌ಆಕ್ಟ್, ಕ್ಯೂಬ್‌ಜಗ್ಲಿಂಗ್, ರೊಲ್ಲಾ ಬೊಲ್ಲಾ, ಹುಲಾ ಹೂಪ್ ಮತ್ತು ಏರಿಯಲ್ ರೋಪ್ ಪ್ರದರ್ಶನ ಇರುತ್ತದೆ.

ಸರ್ಕಸ್ ಪ್ರದರ್ಶನದ ಸಮಯದಲ್ಲಿ ಟಿಕೆಟ್‌ಗಳು ಕೌಂಟರ್‌ಗಳಲ್ಲಿ ಲಭ್ಯವಿರುತ್ತದೆ. ಮುಂಗಡ ಕಾಯ್ದಿರಿಸಿಕೊಳ್ಳಲು. www.rambocircus.in ಲಾಗ್‌ಇನ್ ಮಾಡಿ. ಬುಕ್ ಮೈ ಶೋ ಆಪ್‌ನ ಮೂಲಕ ಸಹ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ.

ಸರ್ಕಸ್ ಪ್ರದರ್ಶನದ ಸಮಯ: ಸೋಮವಾರದಿಂದ ಶುಕ್ರವಾರ ತನಕ ದಿನನಿತ್ಯ 2 ಶೋಗಳು

(ಸಂಜೆ 4.30ಮತ್ತು 7.30 ಗಂಟೆಗೆ)

ಶನಿವಾರ, ರವಿವಾರ ಮತು ರಜಾದಿನಗಳು -3 ಶೋಗಳು

(ಮಧ್ಯಾಹ್ನ 1.30, ಸಂಜೆ 4.30   ಮತ್ತು 7.30 ಗಂಟೆಗೆ)






Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News