ಮೀನುಗಾರಿಕೆ ವೇಳೆ ಸಮುದ್ರಕ್ಕೆ ಬಿದ್ದು ಯುವಕ ನಾಪತ್ತೆ

Update: 2024-05-15 14:28 GMT

ಮಂಗಳೂರು, ಮೇ 15: ಮೀನುಗಾರಿಕೆಯ ವೇಳೆ ವ್ಯಕ್ತಿಯೊಬ್ಬರು ಆಯತಪ್ಪಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾದ ಘಟನೆ ತಿಂಗಳ ಹಿಂದೆ ನಡೆದಿದ್ದು, ಈ ವ್ಯಕ್ತಿಯ ಬಗ್ಗೆ ಮಾಹಿತಿಯಿದ್ದವರು ಪಾಂಡೇಶ್ವರ ಠಾಣೆಗೆ (0824-2220800/2220518 9480805339/ 9480805346) ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಸುಮಾರು 32 ವರ್ಷ ಪ್ರಾಯದ, 6 ಅಡಿ ಎತ್ತರದ, ಗೋಧಿ ಮೈಬಣ್ಣದ ಮುನೀಶ್ ಕುಮಾರ್ ನಾಪತ್ತೆಯಾದ ವ್ಯಕ್ತಿಯಾಗಿ ದ್ದಾರೆ. ಎ.14ರಂದು ರಾತ್ರಿ ಕುವತ್ ಎಂಬ ಹೆಸರಿನ ಬೋಟ್‌ನಲ್ಲಿ ಮಂಗಳೂರು ದಕ್ಕೆಯಿಂದ ಮೀನುಗಾರಿಕೆಗೆ ತೆರಳಿದ್ದರು. ಎ.17ರಂದು ರಾತ್ರಿ 10ಕ್ಕೆ ಮೀನುಗಾರಿಕೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News