ವರ್ಚುವಲ್ ಲಾಬ್ಸ್ ಉಪಕ್ರಮದಡಿ ನೋಡಲ್ ಕೇಂದ್ರವಾಗಿ ʼಬ್ಯಾರೀಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿʼ ಆಯ್ಕೆ

Update: 2024-05-16 14:49 GMT

ಮಂಗಳೂರು: ಐಐಟಿ ದಿಲ್ಲಿ ಸಹಭಾಗಿತ್ವದಲ್ಲಿ ಶಿಕ್ಷಣ ಸಚಿವಾಲಯದ ಸಮನ್ವಯದೊಂದಿಗಿನ ಮುಂಚೂಣಿ ಯೋಜನೆಯಾದ ವರ್ಚುಯಲ್ ಲ್ಯಾಬ್ಸ್ ಉಪಕ್ರಮದಡಿ ಮಂಗಳೂರಿನ ʼಬ್ಯಾರೀಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿʼ ಸಂಸ್ಥೆಯು ನೋಡಲ್ ಕೇಂದ್ರದ ಗೌರವಕ್ಕೆ ಪಾತ್ರವಾಗಿದೆ.

ಐಸಿಟಿಯ ಮೂಲಕ ನಡೆಯುತ್ತಿರುವ ರಾಷ್ಟ್ರೀಯ ಶಿಕ್ಷಣ ಅಭಿಯಾನದಡಿ ಈ ಉಪಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಶಿಕ್ಷಣದ ಮಾದರಿಗಳನ್ನು ಕ್ರಾಂತಿಕಾರಕವನ್ನಾಗಿಸುವ ಗುರಿ ಇದಕ್ಕಿದೆ.

ವರ್ಚುವಲ್ ಲ್ಯಾಬ್ ಗಳು ವಿದ್ಯಾರ್ಥಿಗಳಿಗೆ ಸಿಮ್ಯುಲೇಶನ್ ಆಧಾರಿತ ವೈಜ್ಞಾನಿಕ ಹಾಗೂ ತಾಂತ್ರಿಕ ಪ್ರಕಾರದ ಪ್ರಯೋಗಾಲಯಗಳಿಗೆ ತಡೆ ರಹಿತ ಪ್ರವೇಶವನ್ನು ಒದಗಿಸುತ್ತವೆ. ಎಲ್ಲರನ್ನೂ ಒಳಗೊಳ್ಳುವ ಸ್ಫೂರ್ತಿ ಹೊಂದಿರುವ ಈ ಪ್ರಯೋಗಾಲಯಗಳು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನಲ್ಲದೆ ಸಂಶೋಧನಾಕಾಂಕ್ಷಿಗಳನ್ನೂ ತಮ್ಮತ್ತ ಸೆಳೆಯುತ್ತಿವೆ.

ವರ್ಚುವಲ್ ಲ್ಯಾಬ್ಸ್ ಉಪಕ್ರಮದಡಿ ʼಬ್ಯಾರೀಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿʼ ಸಂಸ್ಥೆಗೆ ನೋಡಲ್ ಸಂಸ್ಥೆಯ ಮಾನ್ಯತೆ ನೀಡಿರುವುದು ಈ ಸಂಸ್ಥೆಯ ಶೈಕ್ಷಣಿಕ ಉತ್ಕೃಷ್ಟತೆ ಹಾಗೂ ಆವಿಷ್ಕಾರದೆಡೆಗಿನ ಬದ್ಧತೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿರುವುದನ್ನು ಸೂಚಿಸುತ್ತಿದೆ. ʼಬ್ಯಾರೀಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿʼ ಸಂಸ್ಥೆಯು ವಿದ್ಯಾರ್ಥಿಗಳು ಕುಶಲ ಹಾಗೂ ಸಂಪನ್ಮೂಲಭರಿತ ನಾಯಕರಾಗಲು, ಭವಿಷ್ಯದ ಸವಾಲುಗಳನ್ನು ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯಿಂದ ಎದುರಿಸಲು ನೆರವು ನೀಡುವ ಗುರಿಯನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News