ಮುಲ್ಕಿ : ನುಸ್ರತುಲ್ ಮಸಾಕೀನ್ ವತಿಯಿಂದ ಪುಸ್ತಕ ವಿತರಣೆ

Update: 2024-06-11 13:07 GMT

ಮಂಗಳೂರು, ಜೂ.11: ಮುಲ್ಕಿ ನುಸ್ರತುಲ್ ಮಸಾಕೀನ್ ವತಿಯಿಂದ 55ನೆ ವಾರ್ಷಿಕ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಮುಲ್ಕಿ ಶಾಫಿ ಜುಮಾ ಮಸೀದಿಯ ವಠಾರದಲ್ಲಿ ನಡೆಯಿತು.

ಇಕ್ಬಾಲ್ ಅಹ್ಮದ್ ಮುಲ್ಕಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಖತೀಬ್ ಅಬ್ದುಲ್ ಫತ್ತಾಹ್ ದುಆಗೈದರು.

ಕಾರ್ಯಕ್ರಮದಲ್ಲಿ ಮುಲ್ಕಿ ಪಟ್ಟಣ ಪಂಚಾಯತ್ ಸದಸ್ಯ ಪುತ್ತುಬಾವ, ನುಸ್ರತುಲ್ ಮಸಾಕೀನ್ ಅಧ್ಯಕ್ಷ ಎಂ.ಎ. ಅಮಾನುಲ್ಲಾ, ಕಾರ್ಯದರ್ಶಿ ಅಬ್ದುಲ್ ರಝಾಕ್, ಮಾಜಿ ಅಧ್ಯಕ್ಷ ಎಂ.ಎಸ್. ಅಬ್ದುಲ್ ಜಲೀಲ್, ಶಾಫಿ ಜುಮಾ ಮಸೀದಿಯ ಮಾಜಿ ಅದ್ಯಕ್ಷ ಬಿಎಂ ಲಿಯಾಕತ್ ಅಲಿ, ಕಾರ್ಯದರ್ಶಿ ಫಾರೂಕ್ ಅಹ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News