ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅತ್ಯಾಧುನಿಕ ಎಂಆರ್‌ಐ ಸೌಲಭ್ಯ

Update: 2024-06-11 13:30 GMT

ಮಂಗಳೂರು: ಮಂಗಳೂರು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ (ಎಫ್‌ಎಂಎಂಸಿಎಚ್ ) ಆಸ್ಪತ್ರೆಯಲ್ಲಿ ಅತ್ಯಾಧುನಿಕ ಎಂಆರ್‌ಐ ಯಂತ್ರದ ಸೌಲಭ್ಯ ಆರಂಭಗೊಂಡಿದೆ. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ ನೂತನ ಸೌಲಭ್ಯವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಎಫ್‌ಎಂಸಿಐ ನಿಯೋಜಿತ ನಿರ್ದೇಶಕ ವಂ. ಫಾಸ್ಟಿನ್ ಲ್ಯೂಕಾಸ್ ಲೋಬೊ, ಆಡಳಿತಾಧಿಕಾರಿ ವಂ. ನೆಲ್ಸನ್ ಧೀರಜ್ ಪೈಸ್, ಸಹಾಯಕ ಆಡಳಿತಾಧಿಕಾರಿ ವಂ. ಡೊನಾಲ್ಡ್ ನೀಲೇಶ್ ಕ್ರಾಸ್ತಾ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಡಾ. ಸೌಜನ್ಯ ಮೈನಳ್ಳಿ ಉಪಸ್ಥಿತರಿದ್ದರು.

ರೇಡಿಯೋ ಡಯಾಗ್ನೋಸಿಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ರಾಮ್ ಶೆಣೈ ಬಸ್ತಿ ನೂತನ ಎಂಆರ್ ಐ ಯಂತ್ರದ ರೇಡಿಯೋ ಡಯಾಗ್ನೋಸಿಸ್ ವಿಭಾಗದ ಪ್ರಾಧ್ಯಾಪಕ ಡಾ.ಕೃಷ್ಣ ಕಿರಣ್ ವಂದಿಸಿದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News