ಬ್ಯಾಂಕ್ ಆಫ್ ಬರೋಡಾದಲ್ಲಿ ಸಂಸ್ಥಾಪನಾ ದಿನಾಚರಣೆ

Update: 2024-07-26 14:18 GMT

ಮಂಗಳೂರು : ಬ್ಯಾಂಕ್ ಆಫ್ ಬರೋಡಾದ 117ನೇ ಸಂಸ್ಥಾಪನಾ ದಿನಾಚರಣೆಯನ್ನು ವಲಯ ಕಚೇರಿಯಲ್ಲಿ ರಕ್ತದಾನ, ವಾಕಥಾನ್ ಮತ್ತಿತರ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು.

ಬ್ಯಾಂಕ್‌ನ ಡಾ.ಅಂಬೇಡ್ಕರ್ ವೃತ್ತ ಮಂಗಳೂರಿನಿಂದ ಬಂಟ್ಸ್ ಹಾಸ್ಟೆಲ್ ಹಂಪನಕಟ್ಟೆ ಮತ್ತು ಕಚೇರಿಗೆ ವಾಕಥಾನ್ ನಡೆಸಲಾಯಿತು.

ಉಪ ಪ್ರಧಾನ ವ್ಯವಸ್ಥಾಪಕ ರಮೇಶ್ ಕಾನಡೆ, ಉಪ ಪ್ರಧಾನ ವ್ಯವಸ್ಥಾಪಕ ಅಶ್ವಿನಿ ಕುಮಾರ್, ಉಪ ಪ್ರಧಾನ ವ್ಯವಸ್ಥಾಪಕ ರಾಜಶೇಖರ್, ಪ್ರಾದೇಶಿಕ ವ್ಯವಸ್ಥಾಪಕ ಸನಿಲ್ ಕುಮಾರ್, ಮಂಗಳೂರು ನಗರ, ಅಧಿಕಾರಿಗಳು ಮತ್ತು ಮಂಗಳೂರಿನ ೩೦೦ಕ್ಕೂ ಹೆಚ್ಚು ಸಿಬ್ಬಂದಿಗಳು ಭಾಗವಹಿಸಿದ್ದರು.

ಯಕ್ಷಗಾನ, ಶಾಸ್ತ್ರೀಯ ನೃತ್ಯಗಳು, ಹುಲಿ ನೃತ್ಯ ಇತ್ಯಾದಿಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬೆಂದೂರು, ಸೈಂಟ್ ಸೆಬಾಸ್ಟಿಯನ್ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿತ್ತು. ನಿವೃತ್ತ ಸಿಬ್ಬಂದಿಗಳು, ನೌಕರರು, ಗ್ರಾಹಕರು, ಸುಮಾರು 800 ಜನರು ಭಾಗವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಮಾಜಕ್ಕೆ ಬ್ಯಾಂಕರ್‌ಗಳ ಸೇವೆಯನ್ನು ವಿವರಿಸಿದರು.

ಬ್ಯಾಂಕ್ ಆಫ್ ಬರೋಡಾದ ಇತರ ಉತ್ತಮ ಉಪಕ್ರಮಗಳನ್ನು ಶ್ಲಾಘಿಸಿದರು. ಜನರಲ್ ಮ್ಯಾನೇಜರ್ ಮತ್ತು ರೆನಲ್ ಹೆಡ್ ರಾಜೇಶ್ ಖನ್ನಾ, ಬ್ಯಾಂಕಿನ ಪರಂಪರೆ, ಪಯಣ, ಸಾಮರ್ಥ್ಯಗಳ ಬಗ್ಗೆ ಮಾತನಾಡಿದರು. 

ನಿವೃತ್ತ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್. ಶೆಣೈ, ಇದೇ ಸಂದರ್ಭದಲ್ಲಿ ಮಾತನಾಡಿದರು.

ವೃದ್ಧಾಶ್ರಮಗಳು ಮತ್ತು ಇತರ ಸ್ಥಳಗಳಾದ ವಿಶೇಷ ಮಕ್ಕಳ ಸಾನಿಧ್ಯ ಶಾಲೆ, ಒಲವನಹಳ್ಳಿ ನಿರ್ಗತಿಕರ, ನಿರ್ಲಕ್ಷಿತ ಮತ್ತು ಅಂಚಿನಲ್ಲಿರುವವರ ಮನೆ, ಅಸ್ಸೈಗೋಳಿ ಅಭಯ ಆಶ್ರಮ ಮುಂತಾದವುಗಳಿಗೆ ಸಿಎಸ್‌ಆರ್‌ನಲ್ಲಿ ನೆರವು ನೀಡಲಾಗಿದೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್‌ಎಫ್‌ನ ಕಮಾಂಡೆಂಟ್ ಮತ್ತು ಪ್ರಧಾನ ವ್ಯವಸ್ಥಾಪಕ ವೀರೇಂದ್ರ ಮೋಹನ ಜೋಶಿ ಮತ್ತು ವಲಯ ಮುಖ್ಯಸ್ಥ ರಾಜೇಶ್ ಖನ್ನಾ ಧ್ವಜಾರೋಹಣ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News