ಯೆನೆಪೋಯ ಫಾರ್ಮಸಿ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ

Update: 2024-10-24 15:44 GMT

ಕೊಣಾಜೆ: ಯೆನೆಪೊಯ (ಪರಿಗಣಿತ )ವಿಶ್ವವಿದ್ಯಾಲಯದ ಯೆನೆಪೊಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ 3ನೇ ಪದವಿ ಪ್ರದಾನ ಮತ್ತು ಹಳೆಯ ವಿದ್ಯಾರ್ಥಿಗಳ ಸಮಾವೇಶವು ಮಂಗಳವಾರ ನಡೆಯಿತು.

ಮಣಿಪಾಲ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ನ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಮುತಾಲಿಕ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರಮಾಣ ಪತ್ರ ವಿತರಿಸಿದರು.

ಮೆಡೋರ್ಗಾನಿಕ್ಸ್ ಇಂಡಿಯಾ ಪ್ರೈ.ಲಿ.ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪ್ರಮೋದ್ ಹೆಗ್ಡೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಯೆನೆಪೊಯ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಮೊಹಮ್ಮದ್ ಗುಲ್ಜಾರ್ ಅಹಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಪಪ್ರಾಂಶುಪಾಲ ಡಾ. ರೋಕೆಯಾ ಸುಲ್ತಾನ, ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಡಾ. ಟ್ರೀಸಾ ಪಿವಿ, ಡಾ, ಆಯೇಷಾ ಸುಲ್ತಾನಾ, ದೀಕ್ಷಾ ರಾಯ್, ಮೊಹಮ್ಮದ್ ಆಸಿಫ್ ಇಕ್ಬಾಲ್, ಸಂಘಟನಾ ಸಮಿತಿ ಪ್ರಭಾರಿ ಅಬ್ದುಲ್ ರಹಮಾನ್, ಪ್ರಜಿತಾ ಬಿಜು ಮೊದಲಾದವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ನಿಯತಕಾಲಿಕೆ, ಪ್ಲೇಸ್‌ಮೆಂಟ್ ಕರಪತ್ರ ಮತ್ತು ಎಂ.ಫಾರ್ಮ್ ಫಾರ್ಮಾಸ್ಯೂಟಿಕ್ಸ್ ಪಠ್ಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ಶಾದಿಯಾ ಬಾನು ಅವರಿಗೆ ಚಿನ್ನದ ಪದಕ ಸೇರಿದಂತೆ ಒಟ್ಟು 95 ವಿದ್ಯಾರ್ಥಿಗಳು ತಮ್ಮ ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು. ಸ್ವಫಾ ಹಸ್ನಾ ಮತ್ತು ಸಮರು ಅವರು ಡಿ. ಫಾರ್ಮಸಿ ಮತ್ತು ಎಂ. ಫಾರ್ಮಸಿ ಪ್ರತಿಷ್ಠಿತ ಶೈಕ್ಷಣಿಕ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಸೋಲುಕ್ರಾಫ್ಟ್‌ನ ಸಿಇಒ ಮೊಹಮ್ಮದ್ ಅನೀಸ್ ಮತ್ತು ಮಂಗಳೂರಿನ ಕೆಎಂಸಿ ಆಸ್ಪತ್ರೆ ಅತ್ತಾವರದ ಫಾರ್ಮಾಸಿಸ್ಟ್ ಶಹೀದಾ, 2024 ರ ಅತ್ಯುತ್ತಮ ಹಳೆಯ ವಿದ್ಯಾರ್ಥಿಗಳ ಪ್ರಶಸ್ತಿಯನ್ನು ಪಡೆದರು.









 


 


 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News