ಮಲಾರ್: ನೂತನ ವಸತಿ ಕಟ್ಟಡ ಉದ್ಘಾಟನೆ ಮತ್ತು ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮ

Update: 2024-12-16 14:04 GMT

ಮಂಗಳೂರು: ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ಮಲಾರ್ ಇದರ ನೂತನ ವಸತಿ ಕಟ್ಟಡ ಉದ್ಘಾಟನೆ ಮತ್ತು ಏಕದಿನ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮ ಮಲಾರ್ ಮರ್ಹೂಂ ಶೇಕಬ ಹಾಜಿ ವೇದಿಕೆಯಲ್ಲಿ ನಡೆಯಿತು.

ಫರೀದ್ ನಗರದ ಜುಮಾ ಮಸೀದಿ ಖತೀಬ್ ಅಸಯ್ಯದ್ ಶರಫುದ್ದೀನ್ ತಂಙಳ್ ಅಲ್ ಹೈದ್ರೋಸ್ ದುಅ ನೆರವೇರಿಸಿದರು. ದಾರುಸ್ಸಲಾಮ್ ಎಜ್ಯುಕೇಶನ್ ಸೆಂಟರ್ ಅಧ್ಯಕ್ಷ ಅಸಯ್ಯದ್ ಝೈನುಲ್ ಅಬಿದೀನ್ ತ್ವಾಹ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು. ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಮುಖ್ಯ ಪ್ರಭಾಷಣಗೈದರು. ಮಲಾರ್ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಎಸ್‌.ಎಮ್ ಅಸೀಫ್ ಇಕ್ಬಾಲ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು.

ಕರ್ನಾಟಕ ಸ್ಟೇಟ್ ಅಲೈಡ್ ಆಂಡ್ ಹೆಲ್ತ್ ಕೇರ್ ಕೌನ್ಸಿಲ್ ನ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಫರೀದ್, ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ , ಉದ್ಯಮಿ ಲತೀಫ್ ಗುರುಪುರ, ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ಖತೀಬ್ ಸೈಪುಲ್ಲಾ ಬಾಖವಿ, ಪುದಿಯಂಗಡಿ ಮಸೀದಿ ಖತೀಬ್ ಖಲೀಲುರ್ರಹ್ಮಾನ್ ಖಾಸಿಮಿ ಅಲ್ ಹಂದಾದಿ, ಮಲಾರ್ ಬದ್ರಿಯ‌‌ಜುಮಾ ಮಸೀದಿ ಖತೀಬ್ ಅಬ್ದುಲ್‌ ಲತೀಫ್ ಸಖಾಫಿ, ಅಲ್ ಮುಬಾರಕ್ ಜುಮಾ ಮಸೀದಿ ಖತೀಬ್ ಮೊಹಮ್ಮದ್ ಶಫೀಕ್ ಕೌಸರಿ ಕುಕ್ಕಾಜೆ, ಅರಸ್ತಾನ ಖತೀಬ್ ಇಸ್ಹಾಕ್ ಸ ಅದಿ, ಕುಂಪಲ ನೂರಾನಿ ಯತೀಂ ಖಾನದ ಅಧ್ಯಕ್ಷ ಯು.ಎಸ್ ಅಬೂಬಕ್ಕರ್, ಮದ್ರಸ ಮ್ಯಾನೆಜ್‌ಮೆಂಟ್‌ ದೇರಳಕಟ್ಟೆ ರೇಂಜ್ ಅಧ್ಯಕ್ಷ ಕೆ‌.ಅಬೂಬಕ್ಕರ್ ನಾಟೆಕಲ್, ದೇರಳಕಟ್ಟೆ ರೇಂಜ್ ಜಮೀಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ದಾರಿಮಿ, ಸಿ.ಎಂ ರಿಯಾಲಿಟಿ ಇದರ ಅಡಳಿತ ನಿರ್ದೇಶಕ ಸಿ‌.ಎಂ ಫಾರೂಖ್, ನರಿಂಗಾನ ಗ್ರಾ.ಪಂ ಅಧ್ಯಕ್ಷ ನವಾಝ್ ನರಿಂಗಾನ, ಪಾವೂರು ಗ್ರಾ‌.ಪಂ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೊ, ಹರೇಕಳ ಗ್ರಾ.ಪಂ ಉಪಾಧ್ಯಕ್ಷ ಎಂ.ಪಿ ಅಬ್ದುಲ್‌ ಮಜೀದ್, ಮಲಾರ್ ಸದರ್ ಮುಅಲ್ಲಿಂ ಅಫ್ರೀದ್ ಮಖ್ದೂಮಿ, ಮಲಾರ್ ಬದ್ರಿಯಾ ಜುಮಾ‌ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್ ಅಜ್ಮೀರ್, ಅರಸ್ತಾನ ಮುಬಾರಕ್ ಜುಮಾ ಮಸೀದಿ ಅಧ್ಯಕ್ಷ ಎಂ.ಪಿ ಅಬ್ದುಲ್ ರಹ್ಮಾನ್, ಮಲಾರ್ ಪದವು ಮಸ್ಜಿದುರ್ರಹ್ಮಾನ್ ಅಧ್ಯಕ್ಷ ಎಂ.ಎ ಅಬೂಬಕ್ಕರ್, ಎಮ್.ಇ.ಎಸ್ (ರಿ) ಇದರ ಅಧ್ಯಕ್ಷ ಉಸ್ಮಾನ್ ಮಲಾರ್, ಕೆ.ಇ.ಎಸ್ (ರಿ) ಅಧ್ಯಕ್ಷ ಶಾಹಿಲ್ ಮುಹಮ್ಮದ್ ಹಸನ್, ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಉಪಾಧ್ಯಕ್ಷ ಮುಸ್ತಾಫ ಮಲಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ವಾಗತ ಸಮೀತಿ ಸಂಚಾಲಕ ಝಹೀದ್ ಮಹಮ್ಮದ್ ಸ್ವಾಗತಿಸಿದರು.ನೂರುಲ್ ಇಸ್ಲಾಂ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಕ್ಬರ್ ಮಲಾರ್ ವಂದಿಸಿದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News