ಯುವಕ ನಾಪತ್ತೆ
Update: 2024-12-16 16:51 GMT
ಸುರತ್ಕಲ್ : ಅಣ್ಣನ ಮಗನನ್ನು ಶಾಲೆಗೆ ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ಹೋಗಿದ್ದ ವ್ಯಕ್ತಿಯೊಬ್ಬರು ಕಾಣೆಯಾಗಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಂತವ್ವ ಎಂಬವರ ಮಗ ಬಸವರಾಜ ವಿ. ಬಳಗೋಳಮಠ (35) ಕಾಣೆಯಾದವರು ಎಂದು ತಿಳಿದು ಬಂದಿದೆ. ಇವರು ಅಪಾರ್ಟ್ ಮೆಂಟ್ ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
ಬಸವರಾಜ ವಿ. ಬಳಗೋಳಮಠ ಅವರು ಡಿ.13ರಂದು ಬೆಳಗ್ಗೆ 8:30ರ ಸಮಾರಿಗೆ ತನ್ನ ಅಣ್ಣನ ಮಗನನ್ನು ಶಾಲೆಗೆ ಬಿಟ್ಟು ಬರುವುದಾಗಿ ಮನೆಯಲ್ಲಿ ಹೇಳಿ ತೆರಳಿದ್ದು ಕಾಣೆಯಾಗಿದ್ದಾರೆ. ಇವರು 5.3 ಅಡಿ ಎತ್ತರ ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಸುರತ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.