ಗಾಂಜಾ ಸೇವನೆ ಆರೋಪ: ಇಬ್ಬರ ಬಂಧನ

Update: 2024-12-16 15:38 GMT

ಮಂಗಳೂರು,ಡಿ.16: ಕುಡುಪು ಗ್ರಾಮದ ಮಂದಾರ ಸಮೀಪದ ಪಂಜಿರೈಲು ಬಳಿ ಡಿ.15ರಂದು 7:30ಕ್ಕೆ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ ಮೂಲತಃ ಬೋಳಾರದ ಪ್ರಸಕ್ತ ಕೋಯಂಬತ್ತೂರ್‌ನಲ್ಲಿ ವಾಸವಾಗಿರುವ ಪಾರ್ತಿಬನ್ ಟಿಜಿ (25)ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

*ನಗರದ ಹೊಗೆ ಬಜಾರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಆರೋಪದ ಮೇರೆಗೆ ಮಲಪ್ಪುರಂ ಜಿಲ್ಲೆಯ ಜಫ್ಸಾಲ್ (25) ಎಂಬಾತನನ್ನು ಡಿ.15ರ ಮಧ್ಯಾಹ್ನ 2:30ಕ್ಕೆ ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News